ಶಿಕ್ಷಣ, ಉತ್ಪಾದಕತೆಗೆ ಹೆಚ್ಚಿನ ಆದ್ಯತೆ

kon-1
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ಪರಿಶಿಷ್ಟ ಜಾತಿ ಮತ್ತು ಪಂಗಡದ ನಾಗರಿಕರು ಶಿಕ್ಷಣ ಮತ್ತು ಉತ್ಪಾದಕತೆಗೆ ಹೆಚ್ಚಿನ ಆದ್ಯತೆ ನೀಡಿದಲ್ಲಿ ಸಮಗ್ರ ಬೆಳವಣಿಗೆ ಸಾಧಿಸಲು ಸಾಧ್ಯ ಎಂದು ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆ ಸಂಪನ್ಮೂಲ ವ್ಯಕ್ತಿ ಮೋಹನ್‌ಚಂದ್ರ ಕಾಳಾವರ್ಕರ್ ಹೇಳಿದರು.

ಕಾಡೂರು ಗ್ರಾಪಂನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನಾಗರಿಕರ ಗ್ರಾಮಸಭೆ ಹಾಗೂ ಯೋಜನೆ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಕಾಡೂರು ಪಿಡಿಒ ಮಹೇಶ್ ಕೆ.ಮಹಾತ್ಮಾಗಾಂಧಿ ರಾಷ್ಟ್ರೀಯ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು ವಿವಿಧ ಯೋಜನೆ ಮಾಹಿತಿ ನೀಡಿ, ಈ ಭಾಗದಲ್ಲಿ ವಿಶಿಷ್ಟವಾದ ಕುಲಕಸುಬು ಮಾಡುವ ನಾಗರಿಕರಿದ್ದು, ಪಂಚಾಯಿತಿ ಮತ್ತು ಇಲಾಖಾ ಹಂತದಲ್ಲಿ ಪ್ರೋತ್ಸಾಹ ಹಾಗೂ ಮಾರುಕಟ್ಟೆ ಸೌಲಭ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾಡೂರು ಗ್ರಾಪಂ ಅಧ್ಯಕ್ಷ ಜಲಂಧರ್ ಶೆಟ್ಟಿ, ಉಪಾಧ್ಯಕ್ಷೆ ಪ್ರಭಾವತಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ವೀಣಾ, ಸದಸ್ಯರಾದ ಪಾಂಡುರಂಗ ಶೆಟ್ಟಿ, ಅಮಿತಾ, ಗುಲಾಬಿ, ಗಿರಿಜಾ, ಸತೀಶ್ ಕುಲಾಲ್, ವಿಜಯ ಮರಕಾಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೀನಾಕ್ಷಿ, ಆರೋಗ್ಯ ಇಲಾಖೆ ಮಂಜುಳಾ, ವಿವಿಧ ಇಲಾಖೆ ಅಧಿಕಾರಿಗಳು, ಸಂಜೀವಿನಿ ಒಕ್ಕೂಟ ಪದಾಧಿಕಾರಿಗಳು, ಸಮುದಾಯದ ಮುಖಂಡರಾದ ಶ್ರೀನಿವಾಸ್, ಆನಂದ್, ಸುಧೀರ್ ಮತ್ತು ನಾಗರಿಕರು ಉಪಸ್ಥಿತರಿದ್ದರು. ಶೈಕ್ಷಣಿಕ ಹಾಗೂ ವೈದ್ಯಕೀಯ ಸವಲತ್ತು ವಿತರಿಸಲಾಯಿತು.

ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವುದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವುದು ಅಗತ್ಯ. ಈ ಉದ್ದೇಶಕ್ಕಾಗಿ ಇಲಾಖಾ ಹಂತದಲ್ಲಿ ಲಭ್ಯವಿರುವ ಎಲ್ಲ ಸೌಲಭ್ಯ ಬಳಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗೆ ಪಂಚಾಯಿತಿ ಹಂತದಲ್ಲಿ ಪುಸ್ತಕ ಹಾಗೂ ಇಂಟರ್ನೆಟ್ ಸೇರಿದಂತೆ ಎಲ್ಲ ಸೌಲಭ್ಯ ಲಭ್ಯವಿದ್ದು, ಈ ಭಾಗದಲ್ಲಿ ಸಮುದಾಯದ ಮನೆಗಳಿಗೆ ಭೇಟಿ ನೀಡಿ ಮಾಹಿತಿ ನೀಡಲು ಅಗತ್ಯ ಕ್ರಮ ವಹಿಸಲಾಗಿದೆ. -ಜಲಂಧರ್ ಶೆಟ್ಟಿ ಗ್ರಾಪಂ ಅಧ್ಯಕ್ಷ https://www.vijayavani.net/study-tour-from-coastal-farmers-cooperative https://www.vijayavani.net/bhakthi-rathayatre-udupi-puttige-sri

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net