ಶಿಕ್ಷಣ, ಸಂಘಟನೆ, ಹೋರಾಟದಿಂದ ಪ್ರಗತಿ

Published on

ಹೊಸಪೇಟೆ: ಹೊರನೋಟಕ್ಕೆ ನಾವೆಲ್ಲ ಒಂದೇ. ಆದರೆ ಗ್ರಾಮಗಳ ಒಳಗೆ ನೋಡಿದಾಗ ನಿಜವಾದ ನೋಟ ಗೊತ್ತಾಗುತ್ತದೆ ಎಂದು ಕನ್ನಡ ವಿವಿ ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ತಾರಿಹಳ್ಳಿ ಹನುಮಂತಪ್ಪ ಹೇಳಿದರು.


ಕನ್ನಡ ವಿವಿಯ ಮಾನವಶಾಸ್ತ್ರ ವಿಭಾಗದಲ್ಲಿ ‘ಒಳ ಮೀಸಲಾತಿಗಳು ನಡೆದು ಬಂದ ದಾರಿ, ಸವಾಲು ಮತ್ತು ಸಾಧ್ಯತೆಗಳು’ ಕುರಿತು ಹಮ್ಮಿಕೊಂಡಿದ್ದ ಪಾಕ್ಷಿಕ ಮಾತು ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಾಣಿಗಳಿಗೆ ಕೆರೆಯ ನೀರು ಕುಡಿಯುವ ಹಕ್ಕಿದೆ. ಆದರೆ ಕೆಳಜಾತಿಗಳಿಗೆ ಅವಕಾಶವಿಲ್ಲ. ಶಿಕ್ಷಣ, ಸಂಘಟನೆ ಮತ್ತು ಹೋರಾಟದಿಂದ ಮಾತ್ರ ಪ್ರಗತಿ ಸಾಧ್ಯ ಎಂದರು.


ಸಂಶೋಧನಾರ್ಥಿ ಬಿ.ಅಂಬಣ್ಣ ಮಾತನಾಡಿ, ಸಾವಿರಾರು ವರ್ಷಗಳಿಂದ ಸಾಮಾಜಿಕ, ಆರ್ಥಿಕವಾಗಿ ತುಳಿತಕ್ಕೊಳಗಾಗಿದ್ದ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಡಾ.ಅಂಬೇಡ್ಕರ್ ಸಂವಿಧಾನದ ಮೂಲಕ ಮೀಸಲಾತಿ ಕಲ್ಪಿಸಿಕೊಟ್ಟರು.

ಪ್ರಸ್ತುತ ಎಸ್ಸಿ-ಎಸ್ಟಿ ಮಿಸಲಾತಿಯನ್ನು ಪ್ರಬಲ ಜಾತಿಗಳು ಬಳಸಿಕೊಂಡು ಉನ್ನತವಾಗುತ್ತಿವೆ ಹೊರತು, ದುರ್ಬಲ ವರ್ಗದವರಿಗೆ ನಿಜವಾಗಿಯೂ ಮೀಸಲಾತಿ ಸೌಲಭ್ಯ ಸಿಗುತ್ತಿಲ್ಲ. ರಾಜಕೀಯ ಪಕ್ಷಗಳು ಒಳ ಮೀಸಲಾತಿ ಜಾರಿ ಕುರಿತ ವಿಚಾರವನ್ನು ಕೇವಲ ಒಂದು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದು, ಮನಸ್ಥಿತಿ ಬದಲಾಗಬೇಕು ಎಂದರು. ಪ್ರಾಧ್ಯಾಪಕರಾದ ಡಾ.ತಾರಿಹಳ್ಳಿ ಹನುಮಂತಪ್ಪ, ಸಂಚಾಲಕ ಡಾ.ಎಸ್.ಶಿವರಾಜ, ಡಾ.ಎಲ್.ಶ್ರೀನಿವಾಸ, ಡಾ.ಜೆ.ವಿನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net