ಬಡಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಅವಶ್ಯ

Education of poor children, Kallinath God, Pratibha Puraskara, Kolhara, Mining Employees Welfare Association,
ಕೊಲ್ಹಾರ ಪಟ್ಟಣದ ಉಪ್ಪಾಶಪ್ಪ ದೇವಸ್ಥಾನದ ಸಭಾಂಗಣದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಲ್ಲಿನಾಥ ದೇವರು, ಪುಂಡಲಿಕ ಬಸರಕೋಡ, ಎಸ್.ಐ.ಗೋಲಗೊಂಡ, ಸಿ.ಎಸ್.ಗಿಡ್ಡಪ್ಪಗೋಳ, ಕಲ್ಮೇಶ ಪರಗೊಂಡ, ಬಸವರಾಜ ತುಪ್ಪದ, ಟಿ.ಟಿ.ಹಗೇದಾಳ, ಸಿದ್ಧಲಿಂಗ ಚೌದ್ರಿ, ಈರಪ್ಪ ತೇಲಿ ಇತರರಿದ್ದರು.
Published on

ಕೊಲ್ಹಾರ: ಮಕ್ಕಳಿಗೆ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು. ಬಡ ಮಕ್ಕಳ ಶಿಕ್ಷಣಕ್ಕಾಗಿ ನಾವು ಸಹಾಯ ಮಾಡಿದರೆ ಅವರು ನಮ್ಮನ್ನು ಸದಾ ಕಾಲ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂದು ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಹೇಳಿದರು.

ಪಟ್ಟಣದ ಉಪ್ಪಾಶಪ್ಪ ದೇವಸ್ಥಾನದ ಸಭಾಂಗಣದಲ್ಲಿ ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕದ ನೇತೃತ್ವದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ವಿದ್ಯಾರ್ಥಿಗಳಿಗಾಗಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಎಸ್.ಐ.ಗೋಲಗೊಂಡ ಮಾತನಾಡಿ, ಜಗತ್ತಿಗೆ ಬೆಳಕು ಕೊಟ್ಟವರು ಗಾಣಿಗರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅಂದಾಜು ಹತ್ತು ಕೋಟಿ ಗಾಣಿಗರಿದ್ದಾರೆ. ಸಾಕಷ್ಟು ಉಪ ಪಂಗಡಗಳಿವೆ. ಮೊಟ್ಟಮೊದಲ ಗಾಣಿಗ ಸಂಘ 1926 ರಲ್ಲಿ ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪನವರ ಮಾರ್ಗದರ್ಶನದಲ್ಲಿ ಸ್ಥಾಪನೆಯಾಗಿದೆ ಎಂದರು.

ನಿವೃತ್ತ ಶಿಕ್ಷಕ ಬಿ.ಎಸ್.ಹಂಗರಗಿ ಮಾತನಾಡಿ, ನಮ್ಮ ಸಮಾಜದ ಜೊತೆಗೆ ಇತರ ಸಮಾಜದವರನ್ನು ಗೌರವಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸರಿಯಾಗಿ ಬೆಳೆಸಿದರೆ ಪ್ರತಿಭಾವಂತರಾಗುತ್ತಾರೆ. ಮಕ್ಕಳು ಅಧ್ಯಯನಕ್ಕಾಗಿ ಮೊಬೈಲ್ ಸದ್ಬಳಕೆ ಮಾಡಿಕೊಳ್ಳುವಂತೆ ಪಾಲಕರು ನಿಗಾ ವಹಿಸಬೇಕು ಎಂದರು.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಾದ ಸವಿತಾ ಹಣಮಂತ ಮನ್ನಿಕೇರಿ, ಸಹನಾ ಕಲ್ಲಪ್ಪ ಕಾಖಂಡಕಿ, ನೀಲಕ್ಕ ನಿಂಗಪ್ಪ ಬಾಡಗಿ, ಬೋರಮ್ಮ ಬರಗಿ, ಸೃಷ್ಟಿ ತಿಪ್ಪಣ್ಣ ದಳವಾಯಿ, ಅಶ್ವಿನಿ ಮಹಾಲಿಂಗಪ್ಪ ಪುರ್ಲೆ, ಸಂಧ್ಯಾ ಮೂಲಿಮನಿ ಹಾಗೂ ಪಿಯು ವಿದ್ಯಾರ್ಥಿಗಳಾದ ವರ್ಷಿಣಿ ಬಸವರಾಜ ಗಾಮಾ, ಭೂಮಿಕಾ ರಮೇಶ ಹಂಡಿ, ನಿಂಗಣಗೌಡ ರುದ್ರಗೌಡ ಪಾಟೀಲ, ಅಭಿಷೇಕ ರಮೇಶ ಗೊಳಸಂಗಿ, ವೀರೇಶ ಅಶೋಕ ಗಿಡ್ಡಪ್ಪಗೋಳ, ಕಾವೇರಿ ಪೂಜಾರಿ, ಆರತಿ ಸಿದ್ದಪ್ಪ ಉಪ್ಪಲದಿನ್ನಿ, ಗೀತಾ ಮಲ್ಲಪ್ಪ ಬರಗಿ, ಸಿದ್ಧಲಿಂಗೇಶ್ವರ ಸಂಗನಾಥ ಗಿಡ್ಡಪ್ಪಗೋಳ, ಕಾವೇರಿ ಧರೆಪ್ಪ ಮೂಲಿಮನಿ, ಸಂದೇಶ ಶಂಕ್ರಪ್ಪ ಬಾಡಗಿ, ಚೈತ್ರಾ ಘಂಟಿ ಅವರನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಮಾರಂಭದಲ್ಲಿ ಪುಂಡಲೀಕ ಬಸರಕೋಡ, ಹನುಮಂತ ನ್ಯಾಮಗೊಂಡ, ಸಿದ್ಧಲಿಂಗ ಚೌಧರಿ, ಬಸವರಾಜ ತುಪ್ಪದ, ಚಂದ್ರಕಾಂತ ಡೋಣಗಿ, ಗಿರೀಶ ಬಗಲಿ, ಸಿ.ಎಸ್.ಗಿಡ್ಡಪ್ಪಗೋಳ, ಟಿ.ಟಿ.ಹಗೇದಾಳ, ಈರಪ್ಪ ತೇಲಿ, ಆನಂದ ಕೆಂಭಾವಿ, ಈರಪ್ಪ ಬಾಲಗೊಂಡ, ಕಲ್ಮೇಶ ಪರಗೊಂಡ, ಚಿನ್ನಪ್ಪ ಗಿಡ್ಡಪ್ಪಗೋಳ, ಸಗರಪ್ಪ ಮುರನಾಳ, ನಿಂಗಪ್ಪ ರೊಳ್ಳಿ, ಎಸ್.ಆರ್. ಪಾಟೀಲ, ಎಸ್.ಎಸ್. ಹಂಡಿ, ಎಸ್.ಎಂ.ಕೋರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net