ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವುದು ಅಗತ್ಯ

Public school suddi
Published on

ಉಪ್ಪಿನಬೆಟಗೇರಿ: ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಮುನ್ನೆಲೆಗೆ ತರುವುದು ಮುಖ್ಯವಾಗಿದೆ ಎಂದು ಧಾರವಾಡ ಮಿಲಾನ್ ಫೌಂಡೇಷನ್ ನೌಕರ ಕಾವ್ಯ ಹೇಳಿದರು.

ಸಮೀಪದ ಕರಡಿಗುಡ್ಡ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್, ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿಭಾಗದ ಧಾರವಾಡ ಮಿಲಾನ್ ಫೌಂಡೇಷನ್ ವತಿಯಿಂದ ಭಾನುವಾರ ಏರ್ಪಡಿಸಿದ್ದ (ಗರ್ಲ್ ಐಕಾನ್) ಕಾರ್ಯಕ್ರಮದಲ್ಲಿ ಮಾತನಾಡಿ, ಹೆಣ್ಣು ಮಕ್ಕಳ ಬಾಲ್ಯ ವಿವಾಹ ತಡೆಯುವುದು, ಅವರಲ್ಲಿ ಧೈರ್ಯ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವುದು, ಮಹಿಳಾ ಸಬಲೀಕರಣಗೊಳಿಸುವುದು ನಮ್ಮ ಉದ್ದೇಶವಾಗಿದೆ ಎಂದರು.

ಜಿಲ್ಲಾ ಮಟ್ಟದ ಧಾರವಾಡ ಮಿಲಾನ್ ಫೌಂಡೇಷನ್ (ಗರ್ಲ್ ಐಕಾನ್) ಗೆ ಶಾಲೆಯ ನಾಲ್ಕು ಜನ ಹೆಣ್ಣು ಮಕ್ಕಳು ಆಯ್ಕೆಯಾದರು.

ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲನಗೌಡ ಗೌಡ್ರ, ಸದಸ್ಯರಾದ ಮಲ್ಲಿಕಾರ್ಜುನ ಜಕ್ಕಣ್ಣವರ, ಮಹಾಬಳೇಶ್ವರ ಸಂಗಪ್ಪನವರ, ಸತೀಶ ಅಂಗಡಿ, ವಿದ್ಯಾ, ಹುಬ್ಬಳ್ಳಿ ದೇಶಪಾಂಡೆ ಫೌಂಡೇಷನ್​ನ ಶೃತಿ ಜೋಡಳ್ಳಿ, ಮುಖ್ಯಾಧ್ಯಾಪಕ ಪಿ.ಎಸ್. ಅಂಕಲಿ, ಗ್ರಾಮ ಪರಿವರ್ತನಾ ಟ್ರಸ್ಟ್ ಅಧ್ಯಕ್ಷ ಶಿವಪ್ಪ ಗಡ್ಡಿ, ಶಿವಶಂಕರ ಬಾಚಗುಂಡಿ, ಬಸವರಾಜ ಗುತ್ತೆಪ್ಪನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net