ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ:ಸಚಿವ ಮಧು ಬಂಗಾರಪ್ಪ ಸೂಚನೆ

education minister Madhu Bangarappa school building inauguration kukanoor koppal
ಕುಕನೂರು ತಾಲೂಕಿನ ಕೋಮಲಾಪುರದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬುಧವಾರ ನೂತನ ಶಾಲಾ ಕೊಠಡಿ ಉದ್ಘಾಟಿಸಿದರು. ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಭಾನಾಪುರ ಗ್ರಾಪಂ ಅಧ್ಯಕ್ಷ ಕರಿಯಪ್ಪ ಹಳ್ಳಿಕೇರಿ, ಉಪಾಧ್ಯಕ್ಷೆ ಪವಿತ್ರ ಪ್ರಕಾಶ ಬಂಗೇರ, ಮಾಜಿ ಪಂ ಸದಸ್ಯರಾದ ಯಂಕಣ್ಣ ಯರಾಶಿ, ಹನುಮಂತಗೌಡ ಪಾಟೀಲ್​, ಎಸಿ ಕ್ಯಾಪ್ಟನ್​ ಮಹೇಶ್​ ಮಾಲಗಿತ್ತಿ ಇದ್ದರು.
Published on

ಕುಕನೂರು : ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಹಲವು ಯೋಜನೆ ನೀಡಿದೆ. ಉಚಿತ ಊಟ, ಬಟ್ಟೆ, ಶೂ, ಸದ್ಯ ನೀಟ್​, ಸಿಇಟಿ ಪರೀೆ ತರಬೇತಿ ನೀಡಲು ಮುಂದಾಗಿದೆ. ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತ ಸಚಿವ ಮಧು ಬಂಗಾರಪ್ಪ ಹೇಳಿದರು.

ತಾಲೂಕಿನ ಕೋಮಲಾಪುರ ನೂತನ ಸರ್ಕಾರಿ ಪ್ರೌಢಶಾಲಾ ಕಟ್ಟಡ ಉದ್ಘಾಟಿಸಿ ಬುಧವಾರ ಮಾತನಾಡಿದರು.

ನಾನು ಸಚಿವನಾದ ಮೇಲೆ ಹಿರಿಯರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿರುವೆ. ಪರೀೆಯಲ್ಲಿ ಪಾರದರ್ಶಕತೆ ತರಲು ವೆಬ್​ಕಾಸ್ಟಿಂಗ್​ ಅಳವಡಿಸಿದ್ದರಿಂದ ಲಿತಾಂಶ ಕುಸಿದಿದೆ. ಆದರೆ, ನಮ್ಮ ಮಕ್ಕಳ ಶಿಕ್ಷಣ ಗುಣಮಟ್ಟ ಎಷ್ಟಿದೆ ಎಂಬ ಅರಿವಾಗಿದೆ. ಅದನ್ನು ಸುಧಾರಿಸಲು ಮುಂದಾಗಿದ್ದೇವೆ. ಸರ್ಕಾರಿ ಶಾಲಾ ಶಿಕ್ಷಕರು ಅತಿ ಬುದ್ಧಿವಂತರು. ನಾವು ಅವರ ಜ್ಞಾನವನ್ನು ಸರಿಯಾಗಿ ಬಳಸಿಕೊಳ್ಳಬೇಕಿದೆ. ಶಿಕ್ಷಕರ ಕೊರತೆ ಇದೆ. ನೇಮಕ ಮಾಡಲಾಗುವುದು. ಇರುವ ಸೌಲಭ್ಯ ಬಳಿಸಿ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡಿ. ನನ್ನ ಇಲಾಖೆ ಪ್ರಗತಿ ಬಗ್ಗೆ ವಿಪಕ್ಷದವರು ಪ್ರಶ್ನಿಸಲಿ. ಅದು ಬಿಟ್ಟು ನನ್ನ ಕೂದಲು ಬಗ್ಗೆ ಮಾತನಾಡುವುದು ಬೇಡವೆಂದು ಟಾಂಗ್​ ನೀಡಿದರು.

2014ರಿಂದ ಅನುದಾನಿತ ಶಾಲೆಯಲ್ಲಿ ಶಿಕ್ಷಕರ ನೇಮಕವಾಗಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ನೇಮಿಸಲಾಗುವುದು. ಕರ್ನಾಟಕ ಪಬ್ಲಿಕ್​ ಶಾಲೆ, ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುತ್ತಿದ್ದೇವೆ. ಅಂಗನವಾಡಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅವರ ಕೆಲಸ ಹೋಗುವುದಿಲ್ಲ. ನಮ್ಮ ಇಲಾಖೆ, ಅವರ ಇಲಾಖೆ ಬೇರೆ ಬೇರೆ. ಅವರು ಆತಂಕಪಡುವ ಅಗತ್ಯವಿಲ್ಲ. ಸಿಎಂ ಸಿದ್ದರಾಮಯ್ಯ ಪಕ್ಷಕ್ಕಾಗಿ ಗ್ಯಾರಂಟಿ ಯೋಜನೆ ನೀಡಿಲ್ಲ. ರಾಜ್ಯದ ಜನರಿಗೆ ಅನುಕೂಲಕ್ಕಾಗಿ ನೀಡಿದ್ದಾರೆ. ಬುಲೆಟ್​ ಟ್ರೇನ್​, ವಿಮಾನ ನಿಲ್ದಾಣಕ್ಕಿಂತ ಮುಖ್ಯವಾಗಿ ಶಿಕ್ಷಣ ಬೇಕು. ಇದಕ್ಕಾಗಿ ನಮ್ಮ ಸರ್ಕಾರ ಬದ್ಧವಿದೆ ಎಂದರು.

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲಾ ಕಾಲೇಜು ಆರಂಭವಾಗುತ್ತಿವೆ. ಬಂಗಾರಪ್ಪ ಅವರು ನನ್ನ ಗುರುಗಳು. ಅವರಿಂದ ಅಭಿವೃದ್ಧಿ ಕಾರ್ಯ ಮಾಡುವುದನ್ನು ಕಲಿತಿದ್ದೇನೆ. ಬಂಗಾರಪ್ಪ ಸಿಎಂ ಇದ್ದಾಗ ಆಶ್ರಯ ಮನೆ, ರೈತರಿಗೆ ಉಚಿತ ವಿದ್ಯುತ್​ ನೀಡಿದರು. ಮಧು ಅವರು ಅವರ ತಂದೆಯಂತೆ ಕೆಲಸ ಮಾಡುತ್ತಿದ್ದಾರೆ. ಅವರ ಹೇರ್​ ಕಟಿಂಗ್​, ಬಟ್ಟೆ ಶೈಲಿ ಬಗ್ಗೆ ಬಿಜೆಪಿ ಟೀಕಿಸುವುದು ಸರಿಯಲ್ಲ. ಅದು ಅವರ ವೈಯಕ್ತಿಕ. ಕ್ಷೇತ್ರದಲ್ಲಿ 6 ಪ್ರೌಢ ಶಾಲೆ ಮಂಜೂರಾಗಿವೆ ಎಂದರು.

ಶಾಲಾ ಮಕ್ಕಳು ಸಚಿವ ಮಧು ಬಂಗಾರಪ್ಪಗೆ ಶಿಕ್ಷಕರ ನೇಮಕಾತಿ ಮಾಡುವಂತೆ ಮನವಿ ಸಲ್ಲಿಸಿದರು. ಹೂ ಮಳೆ ಸುರಿಸಿ ಸ್ವಾಗತ ಕೋರಿದರು. ಜತೆಗೆ ಉಡುಗೊರೆ ನೀಡಿ, ೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

ಭಾನಾಪುರ ಗ್ರಾಪಂ ಅಧ್ಯಕ್ಷ ಕರಿಯಪ್ಪ ಹಳ್ಳಿಕೇರಿ, ಉಪಾಧ್ಯಕ್ಷೆ ಪವಿತ್ರ ಪ್ರಕಾಶ ಬಂಗೇರ, ಜಿಪಂ ಮಾಜಿ ಸದಸ್ಯರಾದ ಯಂಕಣ್ಣ ಯರಾಶಿ, ಹನುಮಂತಗೌಡ ಪಾಟೀಲ್​, ಎಸಿ ಕ್ಯಾಪ್ಟನ್​ ಮಹೇಶ್​ ಮಾಲಗಿತ್ತಿ, ತಹಸೀಲ್ದಾರ್​ ಎಚ್​.ಪ್ರಾಣೇಶ, ಡಿಡಿಪಿಐ ಶ್ರೀಶೈಲ ಬಿರಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net