ಶಿಕ್ಷಣ ಕಲಿತರೆ ಭವಿಷ್ಯ ಉಜ್ವಲ

6
ಚಿಕ್ಕೋಡಿ ಪಟ್ಟಣದ ಸಿಎಲ್‌ಇ ಸಂಸ್ಥೆಯ ಕೆ.ಕೆ. ಆಂಗ್ಲಮಾಧ್ಯಮ ಸಿ.ಬಿ.ಎಸ್.ಇ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಿಲನ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿ ಮಾರುತಿ ಕಾಮತ ಅವರನ್ನು ಆಡಳಿತಾಧಿಕಾರಿ ಸಾಗರ ಬಿಸ್ಕೋಪ್ ಸನ್ಮಾನಿಸಿ ಗೌರವಿಸಿದರು. ಎನ್.ಎಸ್.ವಂಟಮುತ್ತೆ, ಸ್ಮೀತಾ ಶಿಂಧೆ ಇದ್ದರು.
Published on

ಚಿಕ್ಕೋಡಿ: ವಿದ್ಯಾರ್ಥಿಗಳು ಶ್ರದ್ಧಾ ಭಕ್ತಿಯಿಂದ ಶಿಕ್ಷಣವನ್ನು ಕಲಿತಾಗ ಮಾತ್ರ ಭವಿಷ್ಯ ಉಜ್ವಲವಾಗುತ್ತದೆ ಎಂದು ಸಿಬಿಎಸ್‌ಇ ತರಬೇತಿ ವಿಭಾಗದ ಸಂಪನ್ಮೂಲ ವ್ಯಕ್ತಿ ಮಾರುತಿ ಕಾಮತ ಹೇಳಿದರು.

ಪಟ್ಟಣದ ಸಿಎಲ್‌ಇ ಸಂಸ್ಥೆಯ ಕೆ.ಕೆ ಆಂಗ್ಲ ಮಾಧ್ಯಮ ಸಿಬಿಎಸ್‌ಇ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಮಿಲನ ಕಾರ್ಯಕ್ರಮಕ್ಕೆ ಈಚೆಗೆ ಚಾಲನೆ ನೀಡಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳುಳ್ಳ ಶಿಕ್ಷಣ ನೀಡಿದಾಗ ಮಾತ್ರ ಆತ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಎನ್.ಎಸ್.ವಂಟಮುತ್ತೆ ಮಾತನಾಡಿ, ಮಕ್ಕಳ ಸರ್ವಾಂಗೀಣ ಅಭಿವದ್ಧಿಯಲ್ಲಿ ಶಾಲೆಯ ವಾತಾವರಣ ಹಾಗೂ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು. ಸಂಸ್ಥೆಯ ಆಡಳಿತಾಧಿಕಾರಿ ಸಾಗರ ಬಿಸ್ಕೋಪ್ ಬಹುಮಾನ ವಿತರಿಸಿದರು. ಶಾಲೆಯ ಪ್ರಾಚಾರ್ಯ ಸ್ಮಿತಾ ಶಿಂಧೆ ಶಾಲೆಯ ವರದಿ ಮಂಡಿಸಿದರು.

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು. ಸಿಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಅಂಗಸಂಸ್ಥೆಯ ಮುಖ್ಯಸ್ಥರು, ಸಿಬ್ಬಂದಿ, ಪಾಲಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net