ವಿದ್ಯೆಯೇ ಬಾಳಿನ ಬೆಳಕು

Education is the light of life
ಕುಂಬಾರಹಳ್ಳ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಮಹಾಸರಸ್ವತಿ ಪೂಜೆ ನಡೆಯಿತು.
Published on

ಚಿಕ್ಕಪಡಸಲಗಿ: ವಿದ್ಯೆಯು ಮಾನವನ ಆಭರಣವಾಗಿದ್ದು, ವಿದ್ಯೆಯಿಂದ ಎಲ್ಲವನ್ನೂ ಗಳಿಸಲು ಸಾಧ್ಯ ಎಂದು ಮುಖ್ಯಶಿಕ್ಷಕ ನಾರಾಯಣ ಶಾಸ್ತ್ರಿ ಹೇಳಿದರು.

ಸಮೀಪದ ಕುಂಬಾರಹಳ್ಳ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡ ಮಹಾಸರಸ್ವತಿ ಪೂಜೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾಧಿದೇವತೆ ಸರಸ್ವತಿ ಆಶೀರ್ವಾದ ಎಲ್ಲರ ಮೇಲೂ ಇರಲಿ. ವಿದ್ವಾನ ಸರ್ವತ್ರ ಪೂಜ್ಯತೇ ಎನ್ನುವಂತೆ ವಿದ್ಯಾವಂತನನ್ನು ಇಡೀ ಜಗತ್ತೇ ಗೌರವಿಸುತ್ತದೆ.

ದ್ಯಾರ್ಥಿಗಳಾದ ನೀವೆಲ್ಲರೂ ಏಕಾಗ್ರತೆಯಿಂದ ಓದಿ ಗುರಿಯನ್ನು ಮುಟ್ಟಿ. ಸಮಾಜದ ಋಣ ತೀರಿಸಿ ಎಂದು ಹೇಳಿದರು. ನಾಗರಪಂಚಮಿ ಹಬ್ಬವು ನಾಡಹಬ್ಬವಾಗಿದ್ದು, ತಮಗೆಲ್ಲ ಸುಖ-ಶಾಂತಿ ನೀಡಲಿ ಎಂದು ಹೇಳಿದರು.

ಶಿಕ್ಷಕ ಸಂಗಮೇಶ ಉಟಗಿ ಮಾತನಾಡಿ, ಲಕ್ಷ್ಮೀ ಇರುವಲ್ಲಿ ಸರಸ್ವತಿ ಇರುತ್ತಾಳೆ ಎಂದು ಹೇಳಲು ಸಾಧ್ಯವಿಲ್ಲ. ಸರಸ್ವತಿ ಇರುವಲ್ಲಿ ಲಕ್ಷ್ಮೀ ಇದ್ದೇ ಇರುತ್ತಾಳೆ. ಮೊದಲು ನೀವು ವಿದ್ಯೆಯನ್ನು ಗಳಿಸಿ. ನಂತರ ಸಂಪತ್ತು, ಕೀರ್ತಿ ಬಂದೇ ಬರುತ್ತದೆ.

ನಾಗರಪಂಚಮಿ ಸಂದರ್ಭದಲ್ಲಿ ಹಾಲನ್ನು ಹುತ್ತಕ್ಕೆ ಎರೆಯುವ ಬದಲು ಬಡಮಕ್ಕಳು, ನಿರ್ಗತಿಕರಿಗೆ ಕುಡಿಯಲು ಕೊಡಿ. ಸಂಸ್ಕೃತಿ ಜತೆ ವೈಜ್ಞಾನಿಕ ಮನೋಭಾವ ರೂಢಿಸಿಕೊಳ್ಳಿ. ಶ್ರಾವಣ ಶುದ್ಧಪಂಚಮಿಯಂದು ಜನಿಸಿದ ವಿಶ್ವಗುರು ಬಸವಣ್ಣ ಮೂಢನಂಬಿಕೆಗಳನ್ನು ಹೋಗಲಾಡಿಸಲು ಶ್ರಮಿಸಿದರು ಎಂದು ಹೇಳಿದರು.

ಮಕ್ಕಳಾದ ಸವಿತಾ ಕುರಣಿ, ಸಾವಿತ್ರಿ ಪಕಾಲಿ, ಸಿಂಚನಾ ಪಾಟೀಲ, ಅಶ್ವಿನಿ ನ್ಯಾಮಗೌಡ, ಕನ್ಯಾಕುಮಾರಿ ಕುರಣಿ ಹಾಡನ್ನು ಹಾಡಿದರು.
ಶಿಕ್ಷಕರಾದ ಶಾರದಾ ಮಠ, ಸಂಜೀವ ಝಂಬುರೆ, ಬಾಹುಬಲಿ ಮುತ್ತೂರ, ಸವಿತಾ ಬೆನಕಟ್ಟಿ, ಆಸೀಫಾಭಾನು ಮೋಮಿನ್, ಶಕುಂತಲಾ ಬಿರಾದಾರ ಮಕ್ಕಳಿಗೆ ಶುಭ ಹಾರೈಸಿದರು.

ಶಿಕ್ಷಕ ಸಂಗಮೇಶ ಉಟಗಿ ನಿರೂಪಿಸಿದರು. ದೈಹಿಕ ಶಿಕ್ಷಕ ಬಾಹುಬಲಿ ಮುತ್ತೂರ ಸ್ವಾಗತಿಸಿದರು. ಶಿಕ್ಷಕಿ ಶಾರದಾ ಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net