

ಹುಬ್ಬಳ್ಳಿ : ನಮ್ಮ ಬಾಳಿಗೆ ಬೆಳಕು ನೀಡುವುದು ವಿದ್ಯೆ. ಎಲ್ಲ ಜ್ಞಾನ, ದಾನಕ್ಕಿಂತ ವಿದ್ಯಾದಾನ ಬಲು ಶ್ರೇಷ್ಠವಾದದ್ದು. ವಿದ್ಯೆಯ ಸಂಕೇತವಾದ ಜ್ಞಾನ ದೀಪವನ್ನು ಹೊತ್ತಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ತುಕಾಮನೀಸಾ ಬೂತೆ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಸುನೀಲ ಹಬೀಬ ಹೇಳಿದರು.
ಇಲ್ಲಿನ ಭೈರಿದೇವರಕೊಪ್ಪದ ಶ್ರೀಮತಿ ಗಂಗಮ್ಮ ಗಿರಿಯಪ್ಪಗೌಡ ಬಾಡನಗೌಡ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಮಕ್ಕಳಿಗೆ ಬಟ್ಟೆ ವಿತರಿಸಿ, ಅವರು ಮಾತನಾಡಿದರು.
ಜೀವನದಿಂದ ಏನನ್ನೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಹೀಗಾಗಿ, ಬದುಕಿರುವಾಗಲೇ ಎಲ್ಲರಿಗೂ ಬೆಳಕಾಗೋಣ ಎಂದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಎಪಿಎಂಸಿ ಪ್ರಾತಿನಿಧಿಕ ಚೇರ್ಮನ್ ಬಸವರಾಜ ಪುರೆ ಅಧ್ಯಕ್ಷತೆ ವಹಿಸಿದ್ದರು.
ಸುನೀಲ ಹಬೀಬ, ಬಸವರಾಜ ಯಕಲಾಸಪುರ, ವೆಂಕನಗೌಡ ಕಂಟೆಪ್ಪಗೌಡರ, ಫಕೀರಪ್ಪ ಪೂಜಾರ, ನಿಖಿಲ ಕಠಾರೆ ಅವರನ್ನು ಸನ್ಮಾನಿಸಲಾಯಿತು.
ಸುನೀಲ ಮೇಹರವಾಡೆ, ನಿಶಾಂತ ಕಠಾರೆ, ವೈಭವ ನೆಹರವಾಡಿ ಅತಿಥಿಗಳಾಗಿದ್ದರು. ಅಯ್ಯಪ್ಪ ದೇವರಮನಿ ಸ್ವಾಗತಿಸಿದರು. ಡಾ. ರಾಮು ಮೂಲಗಿ ವಂದಿಸಿದರು.