ಭಾರತ ಅಭಿವೃದ್ಧಿ ಅಡಿಪಾಯ ಉನ್ನತ ಶಿಕ್ಷಣ

FotoJet tmk 111
Published on

ಕುಣಿಗಲ್:ಭಾರತಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿಯ ದಾಪುಗಾಲಿಡುತ್ತಿದೆ. 2047ರ ವೇಳೆಗೆ ಭಾರತದ ‘ವಿಕಸಿತ ಭಾರತ’ ದೃಷ್ಟಿಕೋನವು ತನ್ನ ಶೈಕ್ಷಣಿಕ ಭೂ ದೃಶ್ಯದಲ್ಲಿ ಸಮಗ್ರ, ಮೌಲ್ಯಾಧಾರಿತ ಮತ್ತು ನಾವೀನ್ಯತೆ ಆಧಾರಿತವಾದ ಪರಿವರ್ತನಾತ್ಮಕ ಬದಲಾವಣೆಗೆ ಅವಕಾಶ ಕಲ್ಪಿಸಿದೆ. ಭಾರತದ ಅಭಿವೃದ್ಧಿಯ ಅಡಿಪಾಯ ಉನ್ನತ ಶಿಕ್ಷಣ ಎಂದು ತುಮಕೂರು ವಿವಿ ಕಾಲೇಜು ಅಧ್ಯಾಪಕರ ಸಂದ ಅಧ್ಯಕ್ಷಡಾ.ಜಿ.ತಿಪ್ಪೇಸ್ವಾಮಿ ತಿಳಿಸಿದರು.

ತುಮಕೂರು ವಿಶ್ವವಿದ್ಯಾನಿಲಯದ ಕಾಲೇಜು ಅಧ್ಯಾಪಕರ ಸಂದಿಂದ ತುಮಕೂರಿನಲ್ಲಿ ಸೆ.19ರಂದು ಏರ್ಪಡಿಸಿರುವ ವಿಕಸಿತ ಭಾರತಕ್ಕಾಗಿ ಶಿಕ್ಷಣ ಕುರಿತ ರಾಷ್ಟ್ರೀಯ ಸಮ್ಮೇಳನಕ್ಕೆ ಅಧ್ಯಾಪಕರ ನೋಂದಣಿಗಾಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೋಮವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ, ಉನ್ನತ ಶಿಕ್ಷಣ ಸಂಸ್ಥೆಗಳು ಜ್ಞಾನದ ಜತೆಗೆ ನಾಯಕತ್ವ ಮತ್ತು ತಾಂತ್ರಿಕ ಏಕೀಕರಣವನ್ನು ಬೆಳೆಸಬೇಕು ಎಂದರು.

ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಉನ್ನತ ಶಿಕ್ಷಣವನ್ನು ಮರುಕಲ್ಪಿಸುವ ಕ್ರಿಯಾತ್ಮಕ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಶಿಕ್ಷಣ ತಜ್ಞರು, ಸಂಶೋಧಕರು, ಉದ್ಯಮ ವೃತ್ತಿಪರರು, ನೀತಿ ನಿರೂಪಕರು ಮತ್ತು ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಆಹ್ವಾನಿಸಲಾಗಿದೆ. ಸಮ್ಮೇಳನದಲ್ಲಿ ಹಲವಾರು ಚರ್ಚೆ, ವಿಮರ್ಶೆ, ಸಂವಾದ, ಸಂವಹನಗಳು ನಡೆಯಲಿವೆ. ಶಿಕ್ಷಣ ಕ್ಷೇತ್ರದ ಪಾಲುದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಪ್ರಾಂಶುಪಾಲ ಪ್ರೊ.ರಾವಾಂಜನಪ್ಪ ವಾತನಾಡಿ, ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯ ಆವಿಷ್ಕಾರಗಳನ್ನು ಅರಿಯಲು ಶೈಕ್ಷಣಿಕ ಸಮ್ಮೇಳನಗಳು ಅನಿವಾರ್ಯ ಎಂದರು

ಸಂದ ಪದಾಧಿಕಾರಿಗಳಾದ ಡಾ.ರೇಣುಕಾಪ್ರಸಾದ್, ಎಂ.ಟಿ.ಈಶ್ವರಪ್ಪ, ಡಾ.ಟಿ.ಎನ್.ನರಸಿಂಹಮೂರ್ತಿ, ಡಾ.ರಾಧಾಕೃಷ್ಣ,ಡಾ.ಶ್ರೀನಿವಾಸ್, ಅನಿತಾಲಕ್ಷ್ಮೀ, ಡಾ.ಧರಣೇಶ್, ಡಾ.ನಾಗಮ್ಮ, ಶ್ರೀನಿವಾಸಪ್ರಭು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net