ಸದೃಢ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಅಡಿಪಾಯ

26 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಗತ್ತಿಗೆ ಸೂರ್ಯ, ಚಂದ್ರರು ಬೆಳಕನ್ನು ನೀಡುತ್ತಾರೆ. ಬೆಳಕು ಎಲ್ಲಿರುತ್ತದೆಯೋ ಅಲ್ಲಿ ಕತ್ತಲೆಯೂ ಇರುತ್ತದೆ. ಇದು ಪ್ರಕೃತಿ ನಿಯಮ. ಆದರೆ ಜಗದಲ್ಲಿ ಕತ್ತಲೆ ಇಲ್ಲದ ಬೆಳಕೊಂದಿದೆ. ಆ ಬೆಳಕೇ ಶಿಕ್ಷಣ ಎಂದು ಹಗರಿಬೊಮ್ಮನಹಳ್ಳಿಯ ಹಂಪಸಾಗರದ ಶ್ರೀ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರದಲ್ಲಿ ಏರ್ಪಡಿಸಿದ್ದ ಪ್ರಥಮ ಪಾಠ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಭವ್ಯ ಭಾರತ ನಿರ್ಮಾಣ ಮಾಡುವಂತಹ ಸಂಕಲ್ಪದೊಂದಿಗೆ ರಾಷ್ಟ್ರೊತ್ಥಾನದಂತಹ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಇಂತಹ ಸಂಸ್ಥೆಯಲ್ಲಿ ಶಿಕ್ಷಣ ಮತ್ತು ಸಂಸ್ಕಾರ ಪಡೆದ ಮಕ್ಕಳು ವಿದ್ಯಾವಂತರಾಗಿ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರ ಹಾಗೂ ವಿದ್ಯಾಲಯದ ಕಾರ್ಯದರ್ಶಿ ರಾಘವೇಂದ್ರ ಅಂಬೇಕರ ಮಾತನಾಡಿ, ರಾಷ್ಟ್ರೊತ್ಥಾನ ಪರಿಷತ್ತಿನ ಮಾಹಿತಿ ನೀಡಿದರು. ಶಾಲೆ ಪ್ರಾಚಾರ್ಯೆ ಡಾ. ಅನಿತಾ ರೈ. ಶಾಲೆಯ ಶೈಕ್ಷಣಿಕ ಪ್ರಗತಿ ಮಂಡಿಸಿದರು.

ಎಂ.ಎನ್​. ಮಠಪತಿ, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು, ಇತರರು ಇದ್ದರು. ಸತೀಶ ಆರ್​. ಸ್ವಾಗತಿಸಿದರು. ರಾಮಚಂದ್ರ ಭಟ್ಟ ನಿರೂಪಿಸಿದರು. ಉಪ ಪ್ರಾಚಾರ್ಯ ಕೃಷ್ಣ ಜೋಶಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net