

ಕಿನ್ನಿಗೋಳಿ: ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಮತ್ತು ರಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಬೆಥನಿ ವಿದ್ಯಾಸಂಸ್ಥೆಗಳ ಪ್ರಾಂತ್ಯಾಧಿಕಾರಿಣಿ ಡಾ.ಲಿಲ್ಲಿ ಪೀರೆರಾ ಬಿ.ಎಸ್. ಹೇಳಿದರು.
ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪ್ರೌಢಶಾಲೆಯ ವಾರ್ಷಿಕೋತ್ಸವ ಸವಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮಗುರು ಸ್ಟೀವನ್ ಕುಟಿನ್ನೂ ಆಶೀರ್ವಚನಗೈದರು. ಡಾ.ಲಿಲ್ಲಿ ಪೀರೆರಾ ಅವರನ್ನು ಗೌರವಿಸಲಾಯಿತು. ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ ನಡೆಯಿತು.
ಮೇರಿವೆಲ್ ಕಾನ್ವೆಂಟಿನ ಸೂಪಿರಿಯರ್ ಪ್ರೇಮಲತಾ ಬಿ.ಎಸ್., ಶಾಲಾ ಸಂಚಾಲಕಿ ಮೋರಿನ್, ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ ಶೆಟ್ಟಿಗಾರ್, ಲಯನ್ಸ್ ಕ್ಲಬ್ ಅಧ್ಯಕ್ಷ ಸುಧಾಕರ ಶೆಟ್ಟಿ, ಉದ್ಯಮಿ ದೀಪಕ್ ರೋಡ್ರಿಗಸ್, ಹಳೇ ವಿದ್ಯಾರ್ಥಿ ಸಂದ ಉಪಾಧ್ಯಕ್ಷೆ ಶೈಲಾ ಸಿಕ್ವೇರಾ, ಶಿಕ್ಷಕ ರಕ್ಷಕ ಸಂದ ಉಪಾಧ್ಯಕ್ಷೆ ಸವಿತಾ ಕುಂದರ್, ಕಾರ್ಯದರ್ಶಿ ಆಶಾ, ಮುಖ್ಯಶಿಕ್ಷಕಿ ಸಿ.ಮೋನಿಕಾ ರೆಬೆಲ್ಲೂ ಮತ್ತಿತರರಿದ್ದರು.
ಮುಖ್ಯಶಿಕ್ಷಕಿ ಲೋಲಿಟಾ ಸ್ವಾಗತಿಸಿದರು. ಸಂಗೀತಾ ವಂದಿಸಿದರು. ಶಿಕ್ಷಕ ಅಲ್ವಿನ್ ಸ್ವಿೇರಾ ನಿರೂಪಿಸಿದರು.