

ಬಸವನಬಾಗೇವಾಡಿ:ಸಮಾಜಕ್ಕೆ ಉತ್ತಮ ನಾಗರಿಕರ ಕೊಡುಗೆ ನೀಡುವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ 5 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡ ಮೌಲಾನಾ ಆರದ್ ಮಾದರಿ(ಆಂಗ್ಲ ಮಾಧ್ಯಮ) ಶಾಲೆ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದ್ದು, ಪಾಲಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕೆಂದು ಸಲಹೆ ನೀಡಿದರು.ಅಂದಾಜು 230ಕ್ಕೂ ಹೆಚ್ಚು ದೇಶಗಳಲ್ಲಿ ಇಂಗ್ಲಿಷ್ ಭಾಷೆಯೇ ಪ್ರಧಾನವಾಗಿದೆಯಲ್ಲದೆ, ಹೆಚ್ಚಿನ ಬೇಡಿಕೆಯೂ ಇದೆ. ಸರ್ಕಾರ ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ಶಿಣಕ್ಕಾಗಿ 100 ಮೌಲಾನಾ ಆರದ್ ಆಂಗ್ಲ ಶಾಲೆ ಸ್ಥಾಪನೆಗೆ ಮುಂದಾಗಿದ್ದು, ೇತ್ರಕ್ಕೂ ಮಂಜೂರಾಗಿದೆ ಎಂದು ತಿಳಿಸಿದರು.
ಶಾಲೆಯಲ್ಲಿ ಶಿಕ್ಷಕರು, ಶಾಲಾ ಕಟ್ಟಡ, ಪ್ರಯೋಗಾಲಯ ಮತ್ತಿತರ ಸೌಲಭ್ಯಗಳನ್ನು ಒದಗಿಸುವುದು ಅಗತ್ಯವಾಗಿದೆ. ಮೌಲಾನಾ ಆರದ್ ಶಾಲೆಯಲ್ಲಿ ಎಲ್ಕೆಜಿಯಿಂದ ಪಿಯುಸಿ ವರೆಗೆ ಶಿಣ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರಲ್ಲದೆ, ಎಲ್ಲ ಸಮುದಾಯದವರು ಸುಶಿಕ್ಷಿತ, ಸಾಮರಸ್ಯದಿಂದ ಬದುಕಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
ಪುರಸಭೆ ಉಪಾಧ್ಯ ಅಶೋಕ ಹಾರಿವಾಳ, ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯ ಲೋಕನಾಥ ಅಗರವಾಲ, ಇಮಾಮ್ ಹಾಫೀಜ್ ಮಹ್ಮದ್ ಅಲಿ, ಶಬ್ಬೀರ್ ಅಹ್ಮದ್ ನದ್ಾ, ಮತಾಬ್ ಬೊಮ್ಮನಹಳ್ಳಿ, ಇಲಾಹಿ ನಾಗರಾಳ, ಅಜೀಜ್ ಭಾಗವಾನ, ರಮಜಾನ ಹೆಬ್ಬಾಳ, ಅಲ್ತ್ಾ ಮುದ್ದೇಬಿಹಾಳ, ಮೆಹಬೂಬ್ ನಾಯ್ಕೋಡಿ, ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಶಾಂತ ಪೂಜಾರಿ, ತಾಲೂಕು ಅಧಿಕಾರಿ ಇಲಾಹಿ ನಾಗರಾಳ, ಶಿಣ ಇಲಾಖೆಯ ಸುನೀಲ ನಾಯಕ, ಎಂ.ಬಿ. ಗಬ್ಬೂರ, ಮುಖ್ಯಶಿಕ್ಷಕ ಜಿ.ಎಸ್. ಸಾತಲಗಾಂವ ಮತ್ತಿತರರಿದ್ದರು.
ರಮಜಾನ್ ಹೆಬ್ಬಾಳ ನಿರೂಪಿಸಿದರು. ಅಲ್ಲತಾಪ್ಪ ಮುದೇಬಿಹಾಳ ಸ್ವಾಗತಿಸಿ, ಮಹಿಬೂಬ ನಾಯ್ಕೋಡಿ ವಂದಿಸಿದರು.
ಬಸವನಬಾಗೇವಾಡಿ ಪಟ್ಟಣದ ತೆಲಗಿ ರಸ್ತೆಯಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ 5 ಕೋಟಿ ರೂ. ವೆಚ್ಚದಲ್ಲಿ ಮೌಲಾನಾ ಆರದ್ ಮಾದರಿ (ಆಂಗ್ಲ ಮಾಧ್ಯಮ) ಶಾಲೆ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು. ಪುರಸಭೆ ಉಪಾಧ್ಯ ಅಶೋಕ ಹಾರಿವಾಳ, ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯ ಲೋಕನಾಥ ಅಗರವಾಲ, ಇಮಾಮ್ ಹಾಫೀಜ್ ಮಹ್ಮದ್ ಅಲಿ, ಶಬ್ಬೀರ್ ಅಹ್ಮದ್ ನದ್ಾ ಇತರರಿದ್ದರು.