

ಮುಳಗುಂದ: ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಸಂಸ್ಕೃತಿ, ಸಂಸ್ಕಾರವನ್ನು ಮಕ್ಕಳಿಗೆ ಕಲಿಸಿ, ಬುದ್ಧಿವಂತರು, ನೀತಿವಂತರನ್ನಾಗಿ ಬೆಳೆಸಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಬಹುಮುಖ್ಯವಾಗಿದೆ ಎಂದು ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರಾಜೇಂದ್ರ ಗಡಾದ ಹೇಳಿದರು.
ಇಲ್ಲಿನ ಬಿ.ಸಿ. ಬಂಗಾರಿ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಏರ್ಪಾಟಾಗಿದ್ದ ವಾರ್ಷಿಕೋತ್ಸವ ಹಾಗೂ ಪಾಲಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು. 2023-24 ನೇ ಸಾಲಿನ 7ನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಹಾಗೂ 2024-25ನೇ ಸಾಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲೆ ಸಮಿತಿ ಅಧ್ಯಕ್ಷ ಎಸ್.ಸಿ. ಬಡ್ನಿ, ಕಾರ್ಯದರ್ಶಿ ಪರಶುರಾಮ ವಂಟಕರ, ಸಂಜಯ ನೀಲಗುಂದ, ಶಿವಬಸವ ಹಸಬಿ, ಹೊನ್ನಪ್ಪ ನೀಲಗುಂದ, ಬಸವರಾಜ ಬಾತಾಖಾನಿ, ಹರ್ಷಲಾ ದೇಶಪಾಂಡೆ, ಮುಖ್ಯಶಿಕ್ಷಕಿ ವೈ.ಎಸ್. ಶಂಕಿನ, ಶಿಕ್ಷಕ ಎ.ಎಸ್. ಬೆಲೇರಿ ಹಾಗೂ ಸಿಬ್ಬಂದಿ, ಮಕ್ಕಳ ಪಾಲಕರು ಇದ್ದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.