ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕು

24Rayabag1
Published on

ರಾಯಬಾಗ: ಸರ್ಕಾರಿ ಶಾಲೆಯಲ್ಲಿ ಪುಸ್ತಕ, ಬಟ್ಟೆ, ಮಧ್ಯಾಹ್ನ ಬಿಸಿಯೂಟ ಸೇರಿ ಎಲ್ಲ ಸೌಕರ್ಯ ಒದಗಿಸಲಾಗುತ್ತಿದ್ದು, ಇದರ ಸದ್ಬಳಕೆಯಾಗಬೇಕು ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ತಾಲೂಕಿನ ಕಂಚಕರವಾಡಿ ಗ್ರಾಮದಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ 36 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಶಾಲಾ ಕೊಠಡಿಗಳನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಪಡೆಯುವುದು ಪ್ರತಿ ಮಗುವಿನ ಹಕ್ಕಾಗಿದ್ದು, ಯಾರೂ ಶಿಕ್ಷಣದಿಂದ ವಂಚಿತರಾಗಬಾರದು.

ಶಾಲೆಗೆ ಅವಶ್ಯರುವ ಕೊಠಡಿಗಳನ್ನು ಮಂಜೂರು ಮಾಡಿಸಲಾಗುವುದು ಎಂದರು.

ಬಿಇಒ ಬಸವರಾಜಪ್ಪ ಆರ್., ಬಿಆರ್‌ಸಿ ಬಸವರಾಜ ಕಾಂಬಳೆ, ಪಿಡಿಒ ಹನುಮಂತ ಖಿಲಾರೆ, ಸಿಆರ್‌ಪಿ ಆರ್.ಎಂ.ಕುರಾಡೆ, ಮುಖ್ಯ ಶಿಕ್ಷಕಿ ನಿರ್ಮಲಾ ಕೊರಬು, ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ವಾರಿ, ಸದಾಶಿವ ಘೋರ್ಪಡೆ, ಅಣ್ಣಾಸಾಹೇಬ ಖೆಮಲಾಪೂರೆ, ಸಂತೋಷ ದೀಪಾಳೆ, ಅಶೋಕ ಶಿಂಗೆ, ಕಲ್ಲಪ್ಪ ಸನದಿ, ಆರ್.ಎಂ.ಪಾಂಡ್ರೆ, ಅಣ್ಣಪ್ಪ ನಾಯಿಕ, ಮಲಗೌಡ ಪಾಟೀಲ, ರಾಮು ಶಮನೆವಾಡಿ, ದೇವಪ್ಪ ಲಬಾಗೆ, ಕುಮಾರ ಬಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net