

ಎನ್.ಆರ್.ಪುರ: ಮಹಿಳೆಗೆ ಘನತೆ ತಂದು ಕೊಡುವ ಕಾರ್ಯ ಸಮಾಜದಿಂದ ಆಗಬೇಕು ಎಂದು ಕುವೆಂಪು ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಶುಭಾ ಮರವಂತೆ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ವೇದಿಕೆಗಳ ಆಶ್ರಯದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹೆಣ್ಣು ಮತ್ತು ಗಂಡಿನಲ್ಲಿ ಜೈವಿಕ ಸಾಮರ್ಥ್ಯ ಬೇರೆಯಾಗಿದೆ. ಹೆಣ್ಣು,ಹೆಣ್ಣೆಂದು ಗಂಡು ಗಂಡೆಂದು ತನ್ನನ್ನು ತಾನು ಗುರುತಿಸಿಕೊಳ್ಳುವುದು ವಿಶ್ವದ ಸ್ತ್ರೀ ವಾದದ ಹೊಸ ಪರಿಕಲ್ಪನೆಯಾಗಿದೆ ಎಂದರು.
ಗಂಡಿನಿಂದ ಶೋಷಣೆಯಾಗುತ್ತದೆ ಎಂಬುದನ್ನು ಬಿಡಬೇಕು. ಮಹಿಳೆಯರ ಬಗ್ಗೆ ಇರುವ ಗಾಧೆಗಳು ಸುಳ್ಳುಗಳಿಂದ ಕೂಡಿದೆ. ಮಹಿಳೆಯರಿಗೆ ಎಲ್ಲ ಅವಕಾಶಗಳನ್ನು ಪಡೆಯುವ ಸಾಮರ್ಥ್ಯ, ಹಕ್ಕು ಇದೆ. ಬೇಗನೆ ಕ್ರಿಯಾಶೀಲತೆ ಕಳೆದುಕೊಳ್ಳಬಾರದು. ವಿಕೃತ ಮನಸ್ಸುಗಳಿಂದ ಮಹಿಳೆಯರ ಮೇಲೆ ಕ್ರೌರ್ಯ ನಡೆಯುತ್ತಿದೆ. ಮಹಿಳೆಯನ್ನು ಸುಂದರವಾದ ವಸ್ತುವನ್ನಾಗಿ ಮಾಡುತ್ತಿರುವುದು ಕ್ರೌರ್ಯ ಹೆಚ್ಚಾಗಿದೆ. ಅವರಿಷ್ಟದ ಬಟ್ಟೆ ಧರಿಸುವುದು ಹೆಣ್ಣು ಮಕ್ಕಳ ಹಕ್ಕಾಗಿದೆ ಎಂದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ, ಪ್ರಾಚಾರ್ಯ ಡಾ.ಧನಂಜಯ, ಉಪನ್ಯಾಸಕರಾದ ಚಂದ್ರಪ್ಪ, ಬಿ.ಟಿ.ರೂಪ, ಜಿ.ಸವಿತಾ, ಮೇರಿ, ಹೇಮಲತಾ, ಎಸ್. ಸವಿತಾ,ರತ್ನ, ಮಂಜುನಾಥ್ ನಾಯಕ್, ಪ್ರಕಾಶ್, ವಿಶ್ವನಾಥ್, ವಿದ್ಯಾರ್ಥಿ ಜೀವನ್ ಇದ್ದರು.