ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಅತ್ಯಗತ್ಯ

Education is essential for community development
ಮಹಾಲಿಂಗಪುರದ ಕೆಂಗೇರಿ ಮಡ್ಡಿಯ ಲಕ್ಷ್ಮೀ ನಗರದಲ್ಲಿ ನಿರ್ಮಿಸಿದ ಬೀರಸಿದ್ಧೇಶ್ವರ ದೇವಸ್ಥಾನ ಉದ್ಘಾಟನೆ ಮತ್ತು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಚಿನ್ಮಯಾನಂದ ಶ್ರೀಗಳು ಮಾತನಾಡಿದರು. ಶಾಸಕ ಸಿದ್ದು ಸವದಿ, ಬಸನಗೌಡ ಪಾಟೀಲ, ಮಹಾಂತೇಶ ಹಿಟ್ಟಿನಮಠ ಇತರರಿದ್ದರು.
Published on

ಮಹಾಲಿಂಗಪುರ: ತಮ್ಮ ಅಪಾರ ಶ್ರದ್ಧೆ ಹಾಗೂ ಭಕ್ತಿಯಿಂದ ಶಿವನನ್ನೇ ಒಲಿಸಿಕೊಂಡ ಬೀರಸಿದ್ಧೇಶ್ವರರು ಜಗತ್ತನ್ನು ಉದ್ಧರಿಸಿದವರು ಎಂದು ಶಿರೂರ ಕನಕ ಬ್ರಹ್ಮ ವಿದ್ಯಾಶ್ರಮದ ಚಿನ್ಮಯಾನಂದ ಮಹಾಸ್ವಾಮಿಗಳು ಹೇಳಿದರು.

ಸ್ಥಳೀಯ ಕೆಂಗೇರಿ ಮಡ್ಡಿಯ ಲಕ್ಷ್ಮೀ ನಗರದಲ್ಲಿ ಬುಧವಾರ ನಿರ್ಮಿಸಿದ ಬೀರಸಿದ್ಧೇಶ್ವರ ದೇವಸ್ಥಾನ ಉದ್ಘಾಟನೆ ಮತ್ತು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಮುದಾಯ ಒಟ್ಟು ಹದಿನಾಲ್ಕು ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿದ್ದರೂ ರಾಜಕೀಯ, ಶೈಕ್ಷಣಿಕವಾಗಿ ಹಿಂದುಳಿದಿರುವುದು ವಿಷಾಧನೀಯ. ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಅತಿ ಅಗತ್ಯವಾಗಿದೆ. ಆಧುನಿಕತೆಗೆ ತಕ್ಕಂತೆ ಶಿಕ್ಷಣದ ಕಡೆಗೆ ಒತ್ತು ಕೊಡಬೇಕು ಎಂದರು.

ಮಹಾಲಿಂಗೇಶ್ವರ ಮಠದ ಶ್ರೀ ಮನ್ಮಮಹಾರಾಜ ನಿರಂಜನ ಜಗದ್ಗುರು ಶ್ರೀ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ, ಅತಿ ನಂಬುಗೆಯ ಸಮುದಾಯ ಯಾವುದಾದರೂ ಈ ಜಗತ್ತಿನಲ್ಲಿದ್ದರೆ ಅದು ಹಾಲಮತ ಸಮುದಾಯ ಎಂದು ಹೇಳಿದರು.
ಲಕ್ಕಪ್ಪ ಮಹಾರಾಜರು ಮಾತನಾಡಿದರು.

ಶಾಸಕ ಸಿದ್ದು ಸವದಿ ಮಾತನಾಡಿ, ದೇವರ ಆರಾಧನೆ ನಮ್ಮ ಸಂಸ್ಕೃತಿ. ಮನಸ್ಸಿನ ಜಂಜಡ ತೊಡೆದು ಹಾಕುತ್ತದೆಯಲ್ಲದೆ ನೆಮ್ಮದಿ ನೀಡುತ್ತದೆ. ಪೂಜ್ಯರ, ಮಹಾತ್ಮರ ಸಂದೇಶಗಳು ಜಗತ್ತಿನ ಶಾಂತಿಗೆ ಕಾರಣವಾಗುತ್ತವೆ ಎಂದರು.

ಮರೆಗುದ್ದಿಯ ಅಡವೇಶ್ವರ ಮಠದ ನಿರುಪಾಧೀಶ್ವರ ಮಹಾಸ್ವಾಮಿಗಳು ಮೂರ್ತಿಗೆ ಶಾಸೋಕ್ತವಾಗಿ ಪ್ರಾಣ ಪ್ರತಿಷ್ಠೆ ಮಾಡಿ ಪೂಜೆ ಸಲ್ಲಿಸಿದರು.
ಇದಕ್ಕೂ ಹಿಂದಿನ ದಿನ ಬೆಳಗ್ಗೆ ವಿವಿಧ ವಾದ್ಯಮೇಳಗಳೊಂದಿಗೆ ಕರಿಸಿದ್ಧೇಶ್ವರ ದೇವಸ್ಥಾನದಿಂದ ಬೀರಸಿದ್ಧೇಶ್ವರ ಏಕಶಿಲಾ ಮೂರ್ತಿಯನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು.

ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಉಪಾಧ್ಯಕ್ಷೆ ಶೀಲಾ ಭಾವಿಕಟ್ಟಿ, ಗಣ್ಯರಾದ ಬಸನಗೌಡ ಪಾಟೀಲ, ಮಹಾಂತೇಶ ಹಿಟ್ಟಿನಮಠ, ಮಹಾಲಿಂಗಪ್ಪ ಜಕ್ಕಣ್ಣವರ, ಡಾ. ರಾಜೇಂದ್ರ ಪಾಟೀಲ, ಹಣಮಂತ ಕೊಣ್ಣೂರ, ಶೇಖರ ಅಂಗಡಿ, ಮಲ್ಲಪ್ಪ ಸಿಂಗಾಡಿ, ಈರಪ್ಪ ದಿನ್ನಮನಿ, ಶಿವಗೊಂಡ ಸನದಿ, ಗಂಗಾಧರ ಮೇಟಿ, ಲಕ್ಕಪ್ಪ ಮೆಡ್ಯಾಗೋಳ, ಮಲ್ಲಪ್ಪ ಭಾವಿಕಟ್ಟಿ, ಚಂದ್ರಪ್ಪ ದೋಣಿ, ಶಿವಪ್ಪ ಹಳ್ಳಿ, ಮಹಾಲಿಂಗಪ್ಪ ಲಾತೂರ, ಮಹೇಶ ಇಟಕನ್ನವರ, ರಾಮಣ್ಣ ಹುಣಶಿಕಟ್ಟಿ, ಬಸಪ್ಪ ಗಜಾಗೋಳ ಇದ್ದರು. ಲಕ್ಷ್ಮಣ ಕಿಶೋರ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net