ವಿಶೇಷ ಪ್ರತಿಭೆ ಗುರುತಿಸುವುದೇ ಶಿಕ್ಷಣ

gan
Published on

ಕುಂದಾಪುರ: ಅಂಕಗಳಿಕೆಯೇ ಮಾನದಂಡವಾಗಿಸುವುದು ಬಿಟ್ಟು ವಿಶೇಷ ಪ್ರತಿಭೆ ಗುರುತಿಸುವುದೇ ನೈಜ ಶಿಕ್ಷಣ. ಮಕ್ಕಳು ಶಿಕ್ಷಕರನ್ನೇ ತಮ್ಮ ಜೀವನಕ್ಕೆ ಮಾದರಿಯಾಗಿ ಪರಿಗಣಿಸುವಂತಿರಬೇಕು ಎಂದು ಉಡುಪಿ ಡಯಟ್‌ನ ನಿವೃತ್ತ ಉಪನ್ಯಾಸ ಪ್ರಭಾಕರ್ ಮಿತ್ಯಂತಾಯ ಅಭಿಪ್ರಾಯಪಟ್ಟರು. ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪ್ರಾಂಶುಪಾಲ ಪ್ರಕಾಶ್ ಶೆಟ್ಟಿ ಹಾಗೂ ಉಪಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಅನ್ವಿತಾ ಸ್ವಾಗತಿಸಿದರು. ಪಾವನಿ ಮತ್ತು ಅನ್ವಿತಾ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ನಂದಿತ ವಂದಿಸಿದರು. ಮಾನ್ವಿ ಮತ್ತು ಶಿವಾನಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net