ವ್ಯಕ್ತಿತ್ವದ ಸಮಗ್ರ ಅಭಿವೃದ್ಧಿಗೆ ಶಿಕ್ಷಣ ಸಹಕಾರಿ: ಡಾ.ಈ.ಸಿ.ನಿಂಗರಾಜ್‌ಗೌಡ

29
Published on

ಮೈಸೂರು: ಮೈಸೂರು ಸೌತ್ ಈಸ್ಟ್ ಕ್ಲಬ್‌ನಿಂದ ಇನ್ನರ್ ವ್ಹೀಲ್ ಕ್ಲಬ್‌ನ ಸಹಯೋಗದೊಂದಿಗೆ ಹತ್ತು ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಮಾತನಾಡಿ, ಶಿಕ್ಷಣ ಎಂಬುದು ವ್ಯಕ್ತಿಯ ಜ್ಞಾನ, ಕೌಶಲ ಆಚಾರ-ವಿಚಾರ, ಮೌಲ್ಯ ಮತ್ತು ವ್ಯಕ್ತಿತ್ವದ ಸಮಗ್ರ ಅಭಿವೃದ್ಧಿಗೆ ಸಹಾಯ ಮಾಡುವ ಮಹತ್ವದ ಪ್ರಕ್ರಿಯೆಯಾಗಿದೆ. ಶಿಕ್ಷಣವು ಕೇವಲ ಪುಸ್ತಕ ಜ್ಞಾನವಲ್ಲ. ಅದು ಜೀವನವನ್ನು ಸರಿಯಾದ ದಿಸೆಯಲ್ಲಿ ನಡೆಸಲು ಮಾರ್ಗದರ್ಶಿ ಕೂಡ ಆಗಿದೆ ಎಂದರು.

ಶಿಕ್ಷಣದ ಉದ್ದೇಶಗಳೆಂದರೆ ಜ್ಞಾನ ವೃದ್ಧಿ, ತತ್ತ್ವಶಾಸ್ತ್ರ, ವಿಜ್ಞಾನ, ಇತಿಹಾಸ, ಭಾಷೆ, ಗಣಿತ ಮುಂತಾದ ವಿಷಯಗಳಲ್ಲಿ ಪರಿಣತಿ ಪಡೆಯುವುದು. ಮಾನವೀಯ ಮೌಲ್ಯಗಳಾದ ಸತ್ಯ, ಅಹಿಂಸೆ, ಶಿಸ್ತು, ಶ್ರದ್ಧೆ, ಸಹಾನುಭೂತಿಯನ್ನೂ ಹೊಂದುವುದರ ಜತೆಗೆ ಸಾಮಾಜಿಕ ಜವಾಬ್ದಾರಿ, ಒಬ್ಬ ವ್ಯಕ್ತಿ ಸಮಾಜದ ಪ್ರತಿಯೊಂದು ಅಂಗವಾಗಿರುವುದರಿಂದ ಜವಾಬ್ದಾರಿ ನಿರ್ವಹಣೆ ಮಾಡುವುದು ಎಂದು ಹೇಳಿದರು.

ಹತ್ತನೇ ತರಗತಿಯ ಪಿ.ಅಮೂಲ್ಯಾ, ಎಂ.ಮನೋಜ್, ಅರ್.ರೋಹಿತ್, ಎನ್.ಡಿ.ರಾಹುಲ್‌ಗಾಂಧಿ, ಎನ್.ತೇಜಸ್, ಪಿಯುಸಿಯ ಎಂ.ಪುಣ್ಯಾ, ಎಂ.ಆದ್ಯಾ, ಪಿ.ಅಮೃತಬಿಂದು, ಎನ್.ಸೌಭಾಗ್ಯಾ, ಎಸ್.ಸತ್ಯಶ್ರೀ ಅವರನ್ನು ಸನ್ಮಾನಿಸಲಾಯಿತು. ಕ್ಲಬ್‌ನ ಅಧ್ಯಕ್ಷ ವೈ.ಕೆ. ಮುರಳೀಧರ್, ಕಾರ್ಯದರ್ಶಿ ಸುರೇಶ್, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಡಾ.ಶ್ರೀಲಕ್ಷ್ಮೀ ವಾಸುದೇವನ್, ಸದಸ್ಯ ಬಿ.ಆರ್.ವೆಂಕಟೇಶ್, ಕ್ಲಬ್ ಮಾಜಿ ಅದ್ಯಕ್ಷ ಎಂ.ರಾಜೀವ್, ಮುಖಂಡರಾದ ಎಂ.ಮೋಹನ್, ಗೋವರ್ಧನ್ ಯಾದವ್, ಮುರಳಿ, ವಾಸುದೇವನ್, ಗಿರೀಶ್ ನಂಜನಗೂಡು, ರವೀಂದ್ರ, ಜ್ಞಾನಶಂಕರ್, ನಾಗರಾಜ್, ಶುಭಾ ಮುರಳೀಧರ್, ಸೀಮಾ ಮರಿಸ್ವಾಮಿ, ವೀಣಾ ರವೀಂದ್ರ, ರೇಖಾಗೌಡ, ಪ್ರಸನ್ನ, ಆನಂದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net