

ಸಿದ್ದಾಪುರ: ನಾಡಿನಲ್ಲಿ ಸರ್ವಧರ್ಮ ಸಹಿಷ್ಟುತೆಯ ಸುಭದ್ರ ಅಡಿಪಾಯ ನಿರ್ಮಾಣವಾಗಬೇಕಾದರೆ ಶಿಕ್ಷಣ ಬಹಳ ಅಗತ್ಯ. ದೇಶದ ಚಿತ್ರಣವನ್ನು ಬದಲಿಸುವ ಶಕ್ತಿ ಶಿಕ್ಷಣಕ್ಕಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಪಟ್ಟಣದ ಶೃಂಗೇರಿ ಶಂಕರ ಮಠದಲ್ಲಿ ಶಿಕ್ಷಕರ ದಿನೋತ್ಸವ ಹಾಗೂ ಗುರುಗೌರವಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಅವರು ಮಾತನಾಡಿದರು. ಸಮಾಜದಲ್ಲಿ ಉಳಿದ ನೌಕರರಿಗಿಂತ ಶಿಕ್ಷರಿಗೆ ಹೆಚ್ಚಿನಗೌರವ ಸಿಗುತ್ತಿದ್ದು ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿಯೂ ಇದೆ ಎಂದು ಹೇಳಿದರು.
ಪಪಂ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನ 6 ಶಿಕ್ಷಕರಿಗೆ ಡಾ. ಎಪಿಜೆ ಅಬ್ದುಲ್ ಕಲಾಂ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ತಾಲೂಕಿನ ವಿದ್ಯಾರ್ಥಿಗಳು, ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾದ ಹಾಗೂ ಸಾಧಕ ಶಿಕ್ಷಕರನ್ನು ಗೌರವಿಸಲಾಯಿತು.
ತಹಸೀಲ್ದಾರ ಎಂ. ಆರ್. ಕುಲಕರ್ಣಿ, ತಾಪಂ ಇಒ ದೇವರಾಜ ಹಿತ್ತಲಕೊಪ್ಪ, ಸುಧೀರ್ ನಾಯ್ಕ, ಕೆ.ಜಿ.ನಾಗರಾಜ, ರಾಜೇಶ ಆರ್. ನಾಯ್ಕ, ಎಂ. ವಿ. ನಾಯ್ಕ, ಗೋಪಾಲ ನಾಯ್ಕ , ಎಸ್.ಎಸ್. ಪಮ್ಮಾರ, ಟಿ.ಕೆ. ನಾಯ್ಕ, ಲೋಕೇಶ ನಾಯ್ಕ ಇತರರಿದ್ದರು.
ಬಿಇಒ ಎಂ. ಎಚ್. ನಾಯ್ಕ ಸ್ವಾಗತಿಸಿದರು. ಸತೀಶ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುರಾಜ ನಾಯ್ಕ, ಗಣೇಶ ಜೋಶಿ ಮತ್ತು ರೇಷ್ಮಾ ನಿರ್ವಹಿಸಿದರು.