

ಪಾವಗಡ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಸರ್ಕಾರಿ, ಅನುದಾನಿತ, ವಸತಿ ಹಾಗೂ ಖಾಸಗಿ ಶಾಲೆಯಗಳ 600ಕ್ಕೂ ಹೆಚ್ಚು ಅಂಕ ಪಡೆದ 125 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸೋಮವಾರ ಶ್ರೀ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ಖಾಸಗಿ ಮತ್ತು ಅನುದಾನ ರಹಿತ ಶಾಲೆಗಳ ಒಕ್ಕೂಟದದಿಂದ ಸನ್ಮಾನಿಸಲಾಯಿತು.
ಡಾ.ಬಿ.ಕೆ.ಮುನಿಸ್ವಾಮಿ ಮಾತನಾಡಿ, ವಿದ್ಯೆ ಎಂಬುದು ತಲೆಮಾರುಗಳನ್ನು ಬದಲಾಯಿಸುತ್ತದೆ. ಶಿಕ್ಷಣದಿಂದ ನಮ್ಮೆಲ್ಲರ ಸ್ಥಿತಿ ಬದಲಾಗುತ್ತದೆ. ಅದು ಹೇಗೆಂದರೆ ನಮ್ಮ ತಾತ- ತಂದೆ ಒಂದೊತ್ತಿನ ಊಟಕ್ಕಾಗಿ ಜೀವನ ನಡೆಸುವಂತ ಪರಿಸ್ಥಿತಿ ಇತ್ತು. ಇಂದು ಪ್ರತಿಯೊಂದು ಮನೆಯಲ್ಲಿ ಕುಟುಂಬಕ್ಕೆ ಬೇಕಾಗುವ ಸೌಲಭ್ಯಗಳಿವೆ. ತಂದೆ&ತಾಯಿ ಮತ್ತು ಗುರುಗಳನ್ನು ಗೌರವದಿಂದ ಕಂಡು ಸಕಲ ಸೌಲಭ್ಯವನ್ನು ಬಳಸಿಕೊಂಡು ಶಿಕ್ಷಣವಂತರಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ, ಸಾಮಾಜಕವಾಗಿ ಮುಂದುವರಿಯಬೇಕಿದೆ ಎಂದು ತಿಳಿಸಿದರು.
ಮಂಗಳವಾಡ ಅಂತ್ಯೋದಯ. ಸಮೂಹ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಹಾಗೂ ಮಧ್ಯಪ್ರದೇಶದ ಮಾನ್ಸರೋವರ್ ಗ್ಲೋಬಲ್ ಯೂನಿವರ್ಸಿಟಿಯಿಂದ ಶಿಕ್ಷಣ ವಿಷಯದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದ ಡಾ.ಬಿ.ಕೆಮುನಿಸ್ವಾಮಿ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು.
ಗುರುಕುಲ ಕಾಲೇಜಿನ ವಿದ್ಯಾರ್ಥಿನಿ ಗಂಗೋತ್ರಿ ಪ್ರಾರ್ಥನೆ ಗೀತೆ ಹಾಡಿದರು. ಪುರಸಭೆ ಅಧ್ಯಕ್ಷ ಸುದೇಶ್ ಬಾಬು, ಶ್ರೀ ಚೈತನ್ಯ ಚಳ್ಳಕೆರೆ ಕಾಲೇಜು ಪ್ರಾಂಶುಪಾಲ ಶ್ರೀರಾಮ್, ಒಕ್ಕೂಟದ ಅಧ್ಯಕ್ಷ ಶಾ.ನ ಪ್ರಸನ್ನಮೂರ್ತಿ, ವೆಂಕಟರಾಮಪ್ಪ, ಜಿ.ಅನಿಲ್ ಕುಮಾರ್, ಗುರುಕುಲ ಶಾಲೆ ಮತ್ತು ಕಾಲೇಜಿನ ಖಜಾಂಚಿ ಎನ್.ಸಿ ನಾಗಭೋಷಣ್, ಶ್ರೀ ಗುರುಕುಲ ಶಾಲೆಯ ಅಧ್ಯಕ್ಷೆ ಪಣಿಶ್ರೀ, ಎನ್.ಶ್ರೀರಾಮ ಸೇರಿದಂತೆ ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಇದ್ದರು.