ಶಿಕ್ಷಣ ನೀಡುವಲ್ಲಿ ಮಠ ಮಂದಿರಗಳ ಕೊಡುಗೆ ಅನನ್ಯ

5
ತೆಲಸಂಗ ಗ್ರಾಮದ ಬಿವಿವಿ ಸಂಘದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಫಕೀರ ಸಿದ್ಧರಾಮ ಶ್ರೀಗಳನ್ನು ಸತ್ಕರಿಸಲಾಯಿತು. ಸಿದ್ಧಾರೂಢ ಶ್ರೀಗಳು, ಮೃತ್ಯುಂಜಯ ಸ್ವಾಮೀಜಿ, ಪ್ರಭುಶಾಂತ ಸ್ವಾಮೀಜಿ ಇತರರಿದ್ದರು.
Published on

ತೆಲಸಂಗ: ಕಲಿತ ವಿದ್ಯೆ ಕೊನೆವರೆಗೂ ಕೈಹಿಡಿಯುತ್ತದೆ ಎಂದು ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ಜಗದ್ಗುರು ಶ್ರೀ ಫಕೀರ ಸಿದ್ಧರಾಮ ಶ್ರೀಗಳು ಹೇಳಿದರು.

ಗ್ರಾಮದ ಬಿವಿವಿ ಸಂಘದ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಗುರುವಿನ ಪಾತ್ರ ಮಹತ್ವದ್ದಾಗಿದೆ. ಅಕ್ಷರ ಕಲಿಸಿದ ಗುರು, ಜನ್ಮ ಕೊಟ್ಟ ತಂದೆ-ತಾಯಿ ಹಾಗೂ ಭೂಮಿಯ ಋಣ ಮರೆಯಬಾರದು. ಶಿಕ್ಷಣ ನೀಡುವಲ್ಲಿ ಮಠ ಮಂದಿರಗಳ ಕೊಡುಗೆ ಅನನ್ಯವಾಗಿದೆ ಎಂದರು.

ವಿಜಯಪುರ ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಶ್ರೀಗಳು ಮಾತನಾಡಿ, ವಿಜ್ಞಾನ-ತಂತ್ರಜ್ಞಾನ ಮುಂದುವರಿದಿದ್ದು, ವಿದ್ಯಾರ್ಥಿಗಳು ಹೆಚೆೆಚ್ಚು ಸಂಶೋಧನೆ ಕೈಗೊಳ್ಳಬೇಕು. ಗುರುಗಳನ್ನು ಮರೆಯಬಾರದು ಎಂದರು.

ಮಣಕವಾಡ ದೇವಮಂದಿರದ ಅಭಿನವ ಮೃತ್ಯುಂಜಯ ಸ್ವಾಮೀಜಿ, ಹತ್ತಿಕಣಬಸದ ವಿರಕ್ತಮಠದ ಪ್ರಭುಶಾಂತ ಸ್ವಾಮೀಜಿ, ತೆಲಸಂಗ ಹಿರೇಮಠದ ವೀರೇಶ್ವರ ದೇವರು, ಮಲ್ಲಿಕಾರ್ಜುನ ಹತ್ತಿ, ಪ್ರಾಚಾರ್ಯ ಡಿ.ಎಂ.ಘೋರ್ಪಡೆ ಸ್ವಾಗತಿಸಿದರು. ಉಪನ್ಯಾಸಕ ಎಸ್.ಡಿ.ಸನಗೊಂಡ ನಿರೂಪಿಸಿದರು. ಮುಖ್ಯಶಿಕ್ಷಕ ಎಸ್.ಎ.ಹೆಳವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net