ಶಿಕ್ಷಣದಿಂದ ಸಮಾಜದಲ್ಲಿ ಶಕ್ತಿಶಾಲಿಯಾಗಿ ಬದುಕಲು ಸಾಧ್ಯ

pdb (2)
Published on

ಪಡುಬಿದ್ರಿ: ಸಮಾನತೆಯ ಶಿಕ್ಷಣವನ್ನು ಏನೂ ಅರಿಯದ ಪುಟ್ಟ ಮಕ್ಕಳಿಗೆ ನೀಡುವ ಮೂಲಕ ಅವರ ಮುಖದಲ್ಲಿ ದೇವರನ್ನು ಕಾಣಬಹುದು. ಶಿಕ್ಷಣದಿಂದ ವ್ಯಕ್ತಿ ವಿಕಸನಗೊಂಡು ಸಮಾಜದಲ್ಲಿ ಶಕ್ತಿಶಾಲಿಯಾಗಿ ಬದುಕಲು ಸಾಧ್ಯ. ಸರ್ಕಾರಿ ಶಾಲೆ ಅಭಿವೃದ್ಧಿಯಾದರೆ ಆ ಗ್ರಾಮ ಅಭಿವೃದ್ಧಿಯಾಗುತ್ತದೆ ಎಂದು ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದರು.

ಬೆಳಪು ಸರ್ಕಾರಿ ಸಂಯುಕ್ತ ಪ್ರೌಢ ಶಾಲೆಯಲ್ಲಿ ಗ್ರಾಮಸ್ಥರ, ದಾನಿಗಳ ಸಹಕಾರದಿಂದ ಪ್ರಾರಂಭಿಸಲಾಗಿರುವ ಎಲ್‌ಕೆಜಿ ಮಕ್ಕಳಿಗೆ ಸಮವಸ್ತ್ರ ಸಹಿತ ಕಲಿಕೋಪಕರಣ ವಿತರಿಸಿ ಮಾತನಾಡಿದರು.

ಬೆಳಪುವಿನಲ್ಲಿ ಶಿಕ್ಷಣ ಕೇಂದ್ರ ಆಗಬೇಕು. ಗ್ರಾಮೀಣ ಭಾಗದ ಜಿಲ್ಲೆ, ಹೊರ ಜಿಲ್ಲೆಯ ಆರ್ಥಿಕ ಹಿಂದುಳಿದ ವರ್ಗದ ಮಕ್ಕಳ ಉನ್ನತ ಶಿಕ್ಷಣದವರೆಗೆ ಯಾವುದೇ ಆರ್ಥಿಕ ಹೊರೆಯಾಗದೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕೆಂಬ ಆಶಯ ಹೊಂದಲಾಗಿದೆ. ಮುಂದೆ 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಪ್ರಾರಂಭ ಮಾಡಲಾಗುವುದು ಎಂದರು.

ಗ್ರಾಮದ ಪ್ರಮುಖರಾದ ಮುಶ್ತಾಕ್ ಸಾಹೇಬ್, ಶಹನವಾಜ್, ಅಜೀಮುಲ್ಲಾ, ಚಂದ್ರಹಾಸ ಬೆಳಪು, ಜಹೀರ್ ಅಹಮದ್, ರವೀಂದ್ರ ನಾಯ್ಕ, ಶೇಖರ್ ನಾಯ್ಕ, ಮಹೇಶ್, ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಅನುಸೂಯ, ಅಧ್ಯಾಪಕಿ ಶಕುಂತಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net