

ನರಗುಂದ: ಶಿಕ್ಷಣ ಜಗತ್ತಿನ ಪ್ರತಿಯೊಬ್ಬ ಸ್ತ್ರೀಯರ ಹಣೆಬರಹ ಬದಲಾಯಿಸಿದೆ. ತೊಟ್ಟಿಲು ತೂಗುವ ಕೈ ಇಂದು ಜಗತ್ತಿನ ಪ್ರತಿಯೊಂದು ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಸ್. ಅಸುಂಡಿ ಹೇಳಿದರು.
ಪಟ್ಟಣದ ಅಲ್ಲಮ ಪ್ರಭುದೇವರ ಪ್ರೌಢಶಾಲೆ, ಶ್ರೀಯಡೆಯೂರ ಸಿದ್ಧಲಿಂಗೇಶ್ವರ ಬಿ.ಇಡಿ ಕಾಲೇಜ್ ಆಶ್ರಯದಲ್ಲಿ ಪಟ್ಟಣದಲ್ಲಿ ಏರ್ಪಡಿಸಿದ್ದ ಸಾವಿತ್ರಿಬಾಯಿ ಫುಲೆಯವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಹುಡೇದಮನಿ ಮಾತನಾಡಿ, ದೇಶದ ಮಹಿಳೆಯರ ಶಿಕ್ಷಣ ಮುಂದುವರಿಯಲು ಬಹುದೊಡ್ಡ ಕೊಡುಗೆ ನೀಡಿರುವ ಸಾವಿತ್ರಿಬಾಯಿ ಫುಲೆ ಸ್ತ್ರೀಯರ ಪಾಲಿನ ದಾರಿದೀಪ ಆಗಿದ್ದಾರೆ ಎಂದು ತಿಳಿಸಿದರು.
ಪ್ರೊ.ಎಂ.ಈ. ವಿಶ್ವಕರ್ಮ, ಶಿಕ್ಷಕಿ ಜ್ಯೋತಿ ಜಾಮದಾರ, ಸುಧಾ ಶಿರುಂಧಮಠ, ಸೀಮಾ ಭೋವಿ, ಪ್ರಗತಿ ಬಡಿಗೇರ, ಲಕ್ಷ್ಮೀ ಚಾಕಲಬ್ಬಿ, ಪುಷ್ಪಾ ಕುರಹಟ್ಟಿ, ವಿನೋದ ಚಲವಾದಿ, ಬಸವರಾಜ ನಿಡಗುಂದಿ, ಹರೀಶ ಗೋಟುರ, ಕಾಲೇಜಿನ ಪ್ರ. ಶಿಕ್ಷಣಾರ್ಧಿಗಳು ಇದ್ದರು.