ಶಿಕ್ಷಣ, ಆರೋಗ್ಯ ಮಾನವ ಬದುಕಿನ ಕಣ್ಣುಗಳಿದ್ದಂತೆ

DND R.V. DESHPANDE
Published on

ದಾಂಡೇಲಿ: ವಿದ್ಯಾರ್ಥಿಗಳು ತಮ್ಮ ದೈನಂದಿನ ಬದುಕಿನಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಮಹತ್ವ ನೀಡಬೇಕು. ಅವು ಮಾನವ ಬದುಕಿನ ಎರಡು ಕಣ್ಣುಗಳು ಇದ್ದಂತೆ. ಶಿಕ್ಷಣ ಜ್ಞಾನ ಮತ್ತು ಉದ್ಯೋಗವನ್ನು ನೀಡಿದರೆ ಆರೋಗ್ಯ ಜೀವನೋತ್ಸಾಹದ ಬದುಕನ್ನು ನೀಡುತ್ತದೆ ಎಂದು ಕರ್ನಾಟಕ ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ನಗರದ ಅಂಬೇವಾಡಿಯ ಪ್ರಥಮ ದರ್ಜೆ ಕಾಲೇಜ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 5 ಕೋಟಿ ರೂ. ಸಾಂಸ್ಥಿಕ ಅಭಿವೃದ್ಧಿ ಯೋಜನೆ ಉದ್ಘಾಟಿಸಿ ಹಾಗೂ ಗ್ರಂಥಾಲಯ, ಬಿಸಿಎ ಕಟ್ಟಡ ಹಾಗೂ ವ್ಯಾಯಾಮ ಶಾಲೆಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಭಾರತದ ಹತ್ತು ಸಾವಿರಕ್ಕೂ ಹೆಚ್ಚು ಕಾಲೇಜ್​ಗಳು ಕೇಂದ್ರ ಸರ್ಕಾರಕ್ಕೆ ಐದು ಕೋಟಿ ರೂ.ಗಳ ಸಾಂಸ್ಥಿಕ ಅಭಿವೃದ್ಧಿ ಯೋಜನೆ ಮಂಜೂರು ಮಾಡಲು ಅರ್ಜಿ ಸಲ್ಲಿಸಿದ್ದು, ಕೇವಲ ದೇಶದಾದ್ಯಂತ 300 ಕಾಲೇಜುಗಳು ಆಯ್ಕೆಯಾಗಿವೆ. ಕರ್ನಾಟಕದಿಂದ ಕೇವಲ 20 ಕಾಲೇಜುಗಳು ಆಯ್ಕೆಯಾಗಿದ್ದು, ಅವುಗಳ ಪೈಕಿ ಈ ಕಾಲೇಜ್ ಒಂದಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಹೊಸ ಕಟ್ಟಡ ಕಾಮಗಾರಿಗಳ ನಿರ್ವಣ, ನವೀಕರಣ ಮತ್ತು ಉನ್ನತೀಕರಣ, ಉಪಕರಣಗಳು ಮತ್ತು ಶೈಕ್ಷಣಿಕ ಚಟುವಟಿಕೆಗೆ ಐದು ಕೋಟಿ ರೂ.ಗಳ ಅನುದಾನದ ಹಂಚಿಕೆ ವಿವರಗಳನ್ನು ಸಭೆಗೆ ನೀಡಿದರು.

ನಗರಸಭೆ ಅಧ್ಯಕ್ಷ ಅಶ್ಪಾಕ್ ಶೇಖ್, ತಹಸೀಲ್ದಾರ್ ಶೈಲೇಶ ಪರಮಾನಂದ, ದಾಂಡೇಲಿ ನಗರಸಭೆ ಪೌರಾಯುಕ್ತ ವಿವೇಕ ಬನ್ನೆ, ತಾಪಂ ಇಒ ಟಿ.ಸಿ. ಹಾದಿಮನಿ, ನಗರಸಭೆ ಸದಸ್ಯರಾದ ಮೋಹನ ಹಲವಾಯಿ, ಸಂಜಯ ನಂದ್ಯಾಳಕರ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಯಾಸ್ಮಿನ್ ಕಿತ್ತೂರ, ಬಶೀರ ಅಹಮ್ಮದ್ ಗಿರಿಯಾಲ, ಇಕ್ವಾಲ್ ಶೇಖ್, ರಫೀಕ್ ಖಾನ್, ಸರಸ್ವತಿ ರಜಪೂತ, ಇತರರಿದ್ದರು. ಪ್ರಾಂಶುಪಾಲ ಎಂ.ಡಿ. ಒಕ್ಕುಂದ, ಬಸವರಾಜ ಹೂಲಿಕಟ್ಟಿ ಹಾಗೂ ಮನೋಹರ ಉಡಚಂಚಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net