ಶಿಕ್ಷಣ ಬಲವರ್ಧನೆಗೊಳ್ಳಬೇಕು: ವಿಶಾಲಾ ಮಲ್ಲಾಪೂರ

21LKD1
Published on

ಲಕ್ಕುಂಡಿ: ಹಳ್ಳಿಗಳು ಅಭಿವೃದ್ಧಿ ಹೊಂದಬೇಕಾದರೇ ಶಿಕ್ಷಣ ಬಲವರ್ಧನೆಗೊಳ್ಳಬೇಕು ವಿದ್ಯಾರ್ಥಿಗಳು ಸತತ ಪರಿಶ್ರಮ ವಹಿಸಿ ನಿಶ್ಚಿತ ಗುರಿಯೊಂದಿಗೆ ಯಶಸ್ಸು ಕಾಣಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕ್ಷೇತ್ರ ಯೋಜನಾಧಿಕಾರಿ ಶ್ರೀಮತಿ ವಿಶಾಲಾ ಮಲ್ಲಾಪೂರ ಹೇಳಿದರು.
ಇಲ್ಲಿಯ ಬಿ.ಎಚ್. ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜ್‌ನ ಪ್ರೌಢಶಾಲೆಯಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮುಂಡರಗಿ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ) ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ದುಷ್ಟ ಚಟಗಳಿಗೆ ದಾಸರಾಗದೇ ಶ್ರೇಷ್ಠ ಸಂಸ್ಕಾರದ ಸಂಕಲ್ಪದೊದಿಗೆ ಸಮಾಜಮುಖಿಯಾಗಿ ಬದುಕಲು ವಿದ್ಯಾರ್ಥಿಗಳ ಸರ್ವತೋಮಕ ವಿಕಸನಕ್ಕೆ ಪೂರಕವಾಗುವ ಆರೋಗ್ಯ ಸ್ವಾಸ್ಥö್ಯ ಸಂಕಲ್ಪ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಗದಗ ಜಿಲ್ಲಾ ಸದಸ್ಯರಾದ ಜನಪದ ಕಲಾವಿದ ಗವಿಶಿದ್ಧಯ್ಯ ಹಳ್ಳಿಕೇರಿಮಠ ಮಾತನಾಡಿ ಸಾಧನೆಯನ್ನು ಮಾಡಲು ಇಂದು ಸಾಕಷ್ಟು ವೇದಿಕೆಗಳಿದ್ಧು ವಿದ್ಯಾರ್ಥಿಗಳು ಅವುಗಳನ್ನು ಬಳಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕೆಂದರು.
ಸಂಪನ್ಮೂಲ ವ್ಯಕ್ತಿಗಳಾದ ಹಿರಿಯ ಶಿಕ್ಷಕ ಎ.ಎನ್. ಪೂಜಾರ ,ಶಿಕ್ಷಕ ಬಸವರಾಜ ಕಣವಿ, ಉಪನ್ಯಾಸಗಳ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಜನತಾ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಆಯ್. ಎನ್. ಕುಂಬಾರ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮ ಪಂಚಾಯತ ಅಧ್ಯಕ್ಷ ಕೆಂಚಪ್ಪ ಪೂಜಾರ ಅಧ್ಯಕ್ಷತೆ ವಹಿಸಿದ್ದರು.ವಹಿಸಿದ್ಧರು.
ವಲಯ ಮೇಲ್ವಚಾರಕರಾದ ದಾದಕಲಾಂದರ್ ಪ್ರತಿಜ್ಞೆ ವಿಧಿ ಬೋಧಿಸಿದರು.
ವಿ.ಎಸ್.ಕೊಣ್ಣೂರು ಸ್ವಾಗತಿಸಿದರು. ಡಿ.ಡಿ.ಕಿತ್ತೂರು ನಿರೂಪಿಸಿದರು. ಗ್ರಾ. ಪಂ ಸದಸ್ಯೆ ಸೇವಾ ಪ್ರತಿನಿಧಿ ರಜಿಯಾ ಬೇಗಂ ತಹಶಿಲ್ದಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net