ಮಕ್ಕಳಿಗೆ ಶಿಕ್ಷಣ ಒದಗಿಸುವುದು ಎಲ್ಲರ ಕರ್ತವ್ಯ

ಬೇಲೂರು ಪಟ್ಟಣದ ಹೊಯ್ಸಳ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನವನ್ನು ಆಚರಿಸಲಾಯಿತು. ನಾಗೇಂದ್ರ, ಜಿ.ಸಿ.ಪುಟ್ಟಸ್ವಾಮಿಗೌಡ, ಶ್ರೀನಿಧಿ, ಶಿವಮರಿಯಪ್ಪ, ಎಚ್.ವೆಂಕಟೇಶ್, ಎಸ್.ವಿಜಯ್‌ಕುಮಾರ್, ವಿರೂಪಾಕ್ಷ ಇತರರಿದ್ದರು.
ಬೇಲೂರು ಪಟ್ಟಣದ ಹೊಯ್ಸಳ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನವನ್ನು ಆಚರಿಸಲಾಯಿತು. ನಾಗೇಂದ್ರ, ಜಿ.ಸಿ.ಪುಟ್ಟಸ್ವಾಮಿಗೌಡ, ಶ್ರೀನಿಧಿ, ಶಿವಮರಿಯಪ್ಪ, ಎಚ್.ವೆಂಕಟೇಶ್, ಎಸ್.ವಿಜಯ್‌ಕುಮಾರ್, ವಿರೂಪಾಕ್ಷ ಇತರರಿದ್ದರು.
Published on

ಬೇಲೂರು: ವಿಶ್ವದಾದ್ಯಂತ 122 ಬಿಲಿಯನ್ ಬಾಲ ಕಾರ್ಮಿಕರು ಅಪಾಯದ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದು, ಅವರ ರಕ್ಷಣೆಗೆ ಸರ್ಕಾರ ಮತ್ತು ವಿವಿಧ ಸಂಘಟನೆಗಳು ಮುಂದಾದಾಗ ಮಾತ್ರ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಸಾಧ್ಯ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಕಿರಿಯ ನ್ಯಾಯಾಧೀಶ ನಾಗೇಂದ್ರ ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅಭಿಯೋಜನೆ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕಾರ್ಮಿಕ ಹಾಗೂ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಪಟ್ಟಣದ ಹೊಯ್ಸಳ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನ ಹಾಗೂ ಉಚಿತ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ದೇಶದ ಆಸ್ತಿಯಾಗಿದ್ದು ಅವರ ರಕ್ಷಣೆಯೊಂದಿಗೆ ಅವರಿಗೆ ಆರೋಗ್ಯ ಶಿಕ್ಷಣ ಕೊಡಿಸುವುದು ಸರ್ಕಾರ ಮತ್ತು ನಮ್ಮೆಲ್ಲರ ಕರ್ತವ್ಯವಾಗಿದೆ. ಜತೆಗೆ 6 ವರ್ಷದಿಂದ 14 ವರ್ಷದೊಳಗಿನ ಮಕ್ಕಳನ್ನು ಬಾಲ ಕಾರ್ಮಿಕರೆಂದು ಗುರುತಿಸಿದ್ದು, ಈ ಮಕ್ಕಳಿಂದ ಉದ್ಯಮ ಸೇರಿದಂತೆ ಯಾವುದೇ ಅಪಾಯಕಾರಿ ಸ್ಥಳಗಳಲ್ಲಿ ಕೆಲಸ ಮಾಡಿಸಬಾರದೆಂಬ ಉದ್ದೇಶದಿಂದ 1986ರಲ್ಲಿ ದೇಶದಲ್ಲಿ ಬಾಲ ಕಾರ್ಮಿಕರ ವಿರೋಧಿ ಕಾನೂನು ಜಾರಿಗೆ ಬಂದಿದ್ದು, ಇದರ ಅನುಷ್ಠಾನಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು ಎಂದರು.

ಹೊಯ್ಸಳ ಪ್ರೌಢಶಾಲೆ ಮುಖ್ಯಶಿಕ್ಷಕ ಪ್ರಕಾಶ್.ಆರ್ ಮಾತನಾಡಿ, ಭಾರತದ ಸಂವಿಧಾನ ಹಲವು ಹಕ್ಕುಗಳೊಂದಿಗೆ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವ ನೀತಿಯನ್ನು ರೂಪಿಸಿದೆ. ಅದರಂತೆ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಸಮಾಜದ ಆಸ್ತಿಯಾಗಿ ಬೆಳೆಸಬೇಕಾದ ಅವಶ್ಯಕತೆ ಇದೆ. ಆದರೆ ಇತ್ತೀಚಿನ ದಿನಗಳಲ್ಲೂ ಬಾಲ ಕಾರ್ಮಿಕ ಪದ್ಧತಿ ಜಾರಿಯಲ್ಲಿರುವುದು ಅತ್ಯಂತ ಅಮಾನುಷವಾಗಿದ್ದು ಇದನ್ನು ಎಲ್ಲರೂ ಖಂಡಿಸಬೇಕಾಗಿದೆ ಎಂದರು.

ವಕೀಲರ ಸಂಘದ ಕಾರ್ಯದರ್ಶಿ ಜಿ.ಸಿ.ಪುಟ್ಟಸ್ವಾಮಿಗೌಡ, ವಕೀಲ ಶ್ರೀನಿಧಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶಿವಮರಿಯಪ್ಪ, ಹೊಯ್ಸಳ ಶಾಲೆಯ ಮುಖ್ಯಶಿಕ್ಷಕ ಎಚ್.ವೆಂಕಟೇಶ್, ಹಿರಿಯ ಕಾರ್ಮಿಕ ನಿರೀಕ್ಷಕ ಎಸ್.ವಿಜಯ್‌ಕುಮಾರ್, ಎಎಸ್‌ಐ ವಿರೂಪಾಕ್ಷ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net