ಸಮಾಜ ಸುಧಾರಣೆಗೆ ವಿದ್ಯಾವಂತರು ಕೈಜೋಡಿಸಿ

31sgr1
ಸಾಗರದ ಅರಸು ಭವನದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವವನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸಿದರು. ಗಜೇಂದ್ರ, ಚಂದ್ರಶೇಖರ ನಾಯ್ಕ್, ಗಣಪತಿ, ವಿರೂಪಾಕ್ಷಪ್ಪ, ಗೋಪಾಲಕೃಷ್ಣ ಟಿ. ನಾಯ್ಕ್ ಇತರರಿದ್ದರು.
Published on

ಸಾಗರ: ಆಧುನಿಕ ತಂತ್ರe್ಞÁನ ಯುಗದಲ್ಲಿ ನಾವಿದ್ದರೂ, ದಾರ್ಶನಿಕರು ನಿವಾರಿಸಲು ಪ್ರಯತ್ನಿಸಿದ ಮೂಢನಂಬಿಕೆಯನ್ನು ನಾವು ಕೈಬಿಡದಿರುವುದು ವಿಷಾದಕರ ಸಂಗತಿ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಸಾಗರದ ದೇವರಾಜ ಅರಸು ಭವನದಲ್ಲಿ ಗುರುವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ನಾರಾಯಣಗುರು ಜಯಂತಿ ಮತ್ತು ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾವಂತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಆದರೆ ಸಮಾಜ ಸುಧಾರಣೆಯತ್ತ ಚಿತ್ತ ಹರಿಸದಿರುವುದು ಬೇಸರದ ಸಂಗತಿ. ಸಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು. ಸಮಾಜ ಸುಧಾರಣೆಗೆ ಸಾಮಾಜಿಕ ಪ್ರe್ಞÉ ಅತ್ಯಗತ್ಯ. ನಾರಾಯಣ ಗುರುಗಳು, ನುಲಿಯ ಚಂದಯ್ಯ ಆದರ್ಶ ಸಮಾಜದ ಕನಸು ಕಂಡಿದ್ದರು. ಅವರ ಕನಸು ಸಾಕಾರಗೊಳಿಸಲು ಎಲ್ಲರೂ ಪ್ರಯತ್ನಿಸೋಣ ಎಂದರು.
ತಹಸೀಲ್ದಾರ್ ಚಂದ್ರಶೇಖರ ನಾಯ್ಕ್ ಮಾತನಾಡಿ, ನಾರಾಯಣ ಗುರುಗಳು ಹಿಂದುಳಿದ ಸಮಾಜಗಳ ಏಳಿಗೆಗಾಗಿ ಪ್ರಯತ್ನ ನಡೆಸಿದ್ದರು. ಒಂದೇ ಜಾತಿ ಒಂದೇ ದೇವರು ಎನ್ನುವ ತತ್ವದ ಮೂಲಕ ಮಾನವ ಸಂಕುಲದ ಏಳಿಗೆಗೆ ನಾರಾಯಣ ಗುರುಗಳು ಕೊಡುಗೆ ನೀಡಿz್ದÁರೆ. ದೇವಾಲಯ, ಶಿಕ್ಷಣಾಲಯಗಳನ್ನು ಕಟ್ಟಿಸಿ ವಿಶೇಷವಾಗಿ ಗುರುತಿಸಿಕೊಂಡಿದ್ದರೇ, ನುಲಿಯ ಚಂದಯ್ಯ ಮಹಾನ್ ಸಮಾಜ ಸುಧಾರಕರಾಗಿದ್ದರು. ಯುವಜನಾಂಗಕ್ಕೆ ನಾರಾಯಣಗುರುಗಳು ಮತ್ತು ನುಲಿಯ ಚಂದಯ್ಯ ಆದರ್ಶವಾಗಬೇಕು ಎಂದರು.
ನಾರಾಯಣ ಗುರುಗಳ ಕುರಿತು ಮುಖ್ಯ ಶಿಕ್ಷಕ ಗಜೇಂದ್ರ, ನುಲಿಯ ಚಂದಯ್ಯ ಕುರಿತು ಉಪನ್ಯಾಸಕ ಎಸ್.ಎಂ.ಗಣಪತಿ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಕೊರಮ ಸಮಾಜದ ಅಧ್ಯಕ್ಷ ಡಾ. ಕೆ.ವಿರೂಪಾಕ್ಷಪ್ಪ, ಡಿವೈಎಸ್‌ಪಿ ಗೋಪಾಲಕೃಷ್ಣ ಟಿ. ನಾಯ್ಕï, ತಾಲೂಕು ಪಂಚಾಯಿತಿ ಇಒ ನಾಗೇಶ್ ಬ್ಯಾಲಾದ್, ಕಲ್ಲಪ್ಪ ಮೆಣಸಿನಾಳ್, ವಿ.ಟಿ.ಸ್ವಾಮಿ, ಜಿ.ಬಸವರಾಜ್ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net