ಸೈಬರ್ ಬಲೆಗೆ ಬೀಳುವವರು ಶಿಕ್ಷಿತರೇ ಹೆಚ್ಚು

15 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳ ಮುಂದೆ ಮೊಬೈಲ್​ ಬಳಸದೆ ಪುಸ್ತಕ ಹಿಡಿಯಿರಿ. ಮಕ್ಕಳು ಪಾಲಕರ ಪ್ರತಿಬಿಂಬ ಎಂಬುದನ್ನು ಮರೆಯಬಾರದು. ಇಂದು ಯುವಕರು ದಾರಿ ತಪ್ಪುತ್ತಿರುವುದೇ ಪಾಲಕರ ನಡೆ, ನುಡಿಯಿಂದ ಎಂದು ಕೇಂದ್ರ ಕಾರಾಗೃಹದ ಆಂತರಿಕ ಭದ್ರತಾ ಅಧಿಕಾರಿ ಶಿವರಾಜ ಪಾಟೀಲ ನುಡಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪ ಶುಕ್ರವಾರ ಆಯೋಜಿಸಿದ್ದ ಸೈಬರ್​ ಅಪರಾಧ ಮಾಹಿತಿ ನೀಡುವ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಒಳ್ಳೆ ಶಿಕ್ಷಣ ಪಡೆದವರೇ ಹೆಚ್ಚು ಬಲಿಯಾಗುತ್ತಿರುವುದು ವಿಪರ್ಯಾಸ. ತಾಳ್ಮೆಯಿಂದ ಯೋಚನೆ ಮಾಡುವುದನ್ನು ಬಿಟ್ಟು ಆಸೆಗೆ ಬಿದ್ದು ಅಪರಾಧಿಗಳ ಜಾಲದಲ್ಲಿ ಸಿಲುಕುವುದು ಸಾಮಾನ್ಯವಾಗಿದೆ. ಯುವಕರು, ವಿದ್ಯಾಥಿರ್ಗಳು ಈ ಸೈಬರ್​ ಕ್ರೈ0 ಆಳ ಅಗಲ ಅರಿಯಬೇಕು ಎಂದರು.
ಹು-ಧಾ ಸೈಬರ್​ ಅಪರಾಧ ವಿಭಾಗದ ಶಿವಾನಂದ ತಿಮ್ಮಾಪುರ ಮಾತನಾಡಿ, ಸೈಬರ್​ ಅಪರಾಧ, ಅದರ ಸ್ವರೂಪ, ಹೇಗೆ ಬಲಿ ಹಾಕುತ್ತಾರೆ? ಎನ್ನುವ ಕುರಿತು ವಿಸತ ಮಾಹಿತಿ ನೀಡಿದ ಅವರು, ಗೂಗಲ್​ನಿಂದ ಆ್ಯಪ್​, ಅಜಿರ್ಗಳನ್ನು ಡೌನ್​ಲೋಡ್​ ಮಾಡುವಾಗ ಎಚ್ಚರ ವಹಿಸಿ. ವಿದ್ಯಾಥಿರ್ಗಳು ಮೋಬೈಲ್​ ಬಳಕೆ ಬಿಟ್ಟು ಪುಸ್ತಕ ಓದಲು ಸಮಯ ನೀಡಿದರೆ ಜ್ಞಾನ ವಿಸ್ತಾರವಾಗಲಿದೆ ಎಂದರು.
ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಗರದ ವಿವಿಧ ಕಾಲೇಜುಗಳ ಸುಮಾರು 200 ವಿದ್ಯಾಥಿರ್ಗಳು ಭಾಗವಹಿಸಿ ಸಂವಾದ ನಡೆಸಿದರು. ಪ್ರೊ. ಎಂ.ಆರ್​. ಈಶಣ್ಣ, ನಿರ್ಮಲಾ ಚಿಗಟೇರಿ, ಮಹಾಂತೇಶ ನರೇಗಲ್ಲ, ಪ್ರಮೀಳಾ ಜಕ್ಕಣ್ಣವರ, ಪ್ರಾಧ್ಯಾಪಕರು, ಇತರರು ಇದ್ದರು.
ಡಾ. ಶೈಲಜಾ ಅಮರಶೆಟ್ಟಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಿತಾ ಕುಸುಗಲ್ಲ ನಿರೂಪಿಸಿದರು. ಜ್ಯೋತಿ ಭಾವಿಕಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net