ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ ನೀಡಿ

06 SRT-2
ಶಿರಹಟ್ಟಿ ತಾಲೂಕಿನ ಮಾಚೇನಹಳ್ಳಿ ಗ್ರಾಮದಲ್ಲಿ ಏರ್ಪಾಟಾಗಿದ್ದ ಕುರುಬ ಸಮಾಜದ ಸಭೆಯಲ್ಲಿ ಕರುಬರ ಸಂಘದ ಪದಾಧಿಕಾರಿಗಳನ್ನು ಗೌರವಿಸಲಾಯಿತು.
Published on

ಶಿರಹಟ್ಟಿ: ವ್ಯಕ್ತಿಯ ಸರ್ವಾಂಗೀಣ ಪ್ರಗತಿಗೆ ಶಿಕ್ಷಣ ಬಲವಾದ ಅಸ್ತ್ರವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಸಂಸ್ಕಾರ ವಂತರನ್ನಾಗಿಸುವ ಅಗತ್ಯವಿದೆ ಎಂದು ಕುರುಬರ ಸಂಘದ ತಾಲೂಕಾಧ್ಯಕ್ಷ ಹೊನ್ನೇಶ ಪೋಟಿ ಹೇಳಿದರು.

ತಾಲೂಕಿನ ಮಾಚೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ಏರ್ಪಾಟಾಗಿದ್ದ ಕುರುಬರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಕುರುಬರಿಗೆ ಬಳುವಳಿಯಾಗಿ ಬಂದಿರುವ ಕುರಿ ಕಾಯುವ ಕಾಯಕಕ್ಕೆ ಮಕ್ಕಳನ್ನು ದೂಡಬಾರದು. ಅವರ ಭವಿಷ್ಯದ ಬಗ್ಗೆ ಚಿಂತನೆ ಮಾಡಿ ಶಿಕ್ಷಣಕ್ಕೆ ಒತ್ತು ಕೊಟ್ಟರೆ ಅವರ ಬದುಕು ಹಸನಾಗುತ್ತದೆ ಎಂದರು.


ಸಮಾಜದ ಶ್ರೇಯೋಭಿವೃದ್ಧಿ, ಹಿತಚಿಂತನೆಯಲ್ಲಿ ತೊಡಗಬೇಕು. ಕುರುಬ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಿದಾಗ ನಮ್ಮ ಸಮಾಜವೂ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಿದೆ ಎಂದರು.


ಇದೇ ಸಂದರ್ಭದಲ್ಲಿ ಸಂಘಕ್ಕೆ ದಯಾನಂದ ಸೂರಣಗಿ (ಗೌರವಾಧ್ಯಕ್ಷ), ಹನುಮಂತ ಗೊಜನೂರ (ಪ್ರಧಾನ ಕಾರ್ಯದಶಿ) ನೇಮಕವಾದರು. ದೇವಪ್ಪ ಬಟ್ಟೂರ, ಮಂಜುನಾಥ ಘಂಟಿ, ಸಿದ್ದಪ್ಪ ನೆರ್ತಿ, ಹನುಮಂತ ದೇಸಳ್ಳಿ, ಪ್ರಕಾಶ ಆನೆಪ್ಪನವರ, ಮೈಲಾರೆಪ್ಪ ಮರಡಜ್ಜನವರ, ಮಹೇಶ ಹುರಕಣ್ಣವರ, ಮೈಲಾರೆಪ್ಪ ಹಾದಿಮನಿ, ರುದ್ರಪ್ಪ ಆಡಿನ, ಶಿವಣ್ಣ ಹರತಾಳ, ದೇವೇಂದ್ರ ಕುದರಿ, ಹಾಲನಗೌಡ ಪಾಟೀಲ, ಸುರೇಶ ತಳ್ಳಳ್ಳಿ, ರಾಮಣ್ಣ ಕಂಬಳಿ, ಯಲ್ಲಪ್ಪ ಹಾಲಪ್ಪನವರ, ವಸಂತ ಜಗ್ಗಲರ, ಪ್ರಕಾಶ ಹೋರಿ, ಆನಂದ ಮಾಳೇಕೊಪ್ಪ, ಈರಮ್ಮ ಬ್ಯಾಲಹುಣಶಿ, ಹೇಮವ್ವ ಹರ್ಲಾಪೂರ, ಗಂಗವ್ವ ಆಡಿ, ಕಸ್ತೂರೆಪ್ಪ ತಳ್ಳಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net