ಫಲ ಪುಷ್ಪ ಪ್ರದರ್ಶನದಲ್ಲಿ ಖಾದ್ಯ ಘಮ

2sirsi2- FALA PUSHPA PRADARSHANA
Published on

ಶಿರಸಿ: ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಆಯೋಜಿಸಲಾದ ಫಲಪುಷ್ಪ ಪ್ರದರ್ಶನದ ಎರಡನೇ ದಿನವಾದ ಭಾನುವಾರ ಜನಸಂದಣಿ ಅಧಿಕವಾಗಿತ್ತು. ಆಕರ್ಷಕ ಹೂವುಗಳ ಜೋಡಣೆ, ಸೆಲ್ಪಿ ಪಾಯಿಂಟ್​ಗಳಲ್ಲಿ ಫೋಟೋ ತೆಗೆದುಕೊಳ್ಳಲು ಜನ ಮುಗಿಬಿದ್ದಿದ್ದರು.

ಭಾನುವಾರ ಕೃಷಿಕ ಮಹಿಳೆಯರಿಗೆ ವಿವಿಧ ಖಾದ್ಯ ತಯಾರಿಕಾ ಸ್ಪರ್ಧೆ ಆಯೋಜಿಸಲಾಗಿತ್ತು. ಬಾಳೆ ಬೆಳೆಯಿಂದ ಮಾಡಿದ ಖಾದ್ಯದ ಸ್ಪರ್ಧೆಯಲ್ಲಿ 35ಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು. 70ಕ್ಕೂ ಅಧಿಕ ರೀತಿಯ ಖಾದ್ಯಗಳನ್ನು ಮನೆಯಲ್ಲಿಯೇ ತಯಾರಿಸಿ ಸ್ಪರ್ಧೆಗೆ ತಂದಿದ್ದರು. ಬಾಳೆಕಾಯಿ ರೋಲ್ಸ್, ಬಾಳೆಕಾಯಿ ಹಲ್ವಾ, ಬಾಳೆಕಾಯಿ ಭರ್ಪಿ, ಲಡ್ಡು ಸೇರಿ ಹೊಸ ಹೊಸ ಮಾದರಿಯ ಖಾದ್ಯಗಳನ್ನು ತಯಾರಿಸಿ ಸ್ಪರ್ಧೆಗೆ ತಂದಿದ್ದರು. ಸಿಹಿ ಖಾದ್ಯ ಸ್ಪರ್ಧೆಯಲ್ಲಿ ನಯನಾ ಗೌಡರ್ ಮೊದಲ ಸ್ಥಾನ, ಪ್ರೇಮಾ ಜೋಶಿ, ಅಮೃತಾ ಹೆಗಡೆ ಬಹುಮಾನ ಪಡೆದರೆ, ಖಾರದ ಖಾದ್ಯ ತಯಾರಿಕಾ ಸ್ಪರ್ಧೆಯಲ್ಲಿ ಕುಸುಮಾ ಹೆಗಡೆ, ಜಯಲಕ್ಷ್ಮೀ ಹೆಗಡೆ ಹಾಗೂ ಉಷಾ ಪ್ರಕಾಶ ಹೆಗಡೆ ಸಾಲೆಕೊಪ್ಪ ಬಹುಮಾನ ಪಡೆದರು. ವಿಶೇಷ ಖಾದ್ಯ ಸ್ಪರ್ಧೆಯಲ್ಲಿ ಸುಮಾ ಹೆಗಡೆ ಮಣಬಾಗಿ, ಆಶಾ ಹೆಗಡೆ ಸಿದ್ದಾಪುರ, ಶ್ವೇತಾ ಹೆಗಡೆ ಗುಳ್ಳೆಜಡ್ಡಿ ಬಹುಮಾನ ಪಡೆದುಕೊಂಡರು. ಸೋಮವಾರ ಫಲಪುಷ್ಪ ಪ್ರದರ್ಶನ ಕೊನೆಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net