

ರಾಯಚೂರು ಹಿಂದುಳಿದ ಜಿಲ್ಲೆ ಎನ್ನುವ ಹಣೆ ಪಟ್ಟಿಯನ್ನು ತೊಲಗಿಸಲು ಜಿಲ್ಲೆಯ ಉಪನ್ಯಾಸಕರು ಕಡಿಮೆ ಸಂಖ್ಯೆಯಲ್ಲಿದ್ದರು ಸಾಧನೆ ಮಾಡಲು ಶ್ರಮಿಸುತ್ತಿದ್ದು,ಪ್ರಸಕ್ತ ಸಾಲಿನಲ್ಲಿ ಕೇಲವ ಶೇ.೫೮.೭೫ ರಷ್ಟು -Àಲಿತಾಂಶ ಪಡೆದು ೩೦ ನೇ ಸ್ಥಾನಕ್ಕೆ ಖುಷಿ ಪಟ್ಟಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಶೇ.೧೪.೩೬ ರಷ್ಟು -Àಲಿತಾಂಶ ಕುಸಿದಿದ್ದರಿಂದ ವಿದ್ಯಾರ್ಥಿಗಳ ಪಾಲಕರು ಆತಂಕ ಪಡುತ್ತಿದ್ದಾರೆ.
ಕಳೆದ ೪ ವರ್ಷದಿಂದ ಜಿಲ್ಲೆಯು ಕೇವಲ ೩೦ ಮತ್ತು ೩೧ನೇ ಸ್ಥಾನಕ್ಕೆ ಪೈಪೋಟಿ ನೀಡುತ್ತಿದ್ದು, ೨೦೨೨ ರಲ್ಲಿ ಶೇ.೫೭.೯೪ಗಳಿಸಿ ೩೧ನೇ ಸ್ಥಾನ ಪಡೆದರೆ,೨೦೨೩ರಲ್ಲಿ ಶೇ.೬೬.೨೨ ರಷ್ಟು -Àಲಿತಾಂಶಗಳಿಸಿದರು,೩೧ನೇ ಸ್ಥಾನ ಪಡೆಯಲಾಗಿತ್ತು. ೨೦೨೪ ರಲ್ಲಿ ಶೇ.೭೩.೧೧ರಷ್ಟು ಗಳಿಸಿದರು ೩೦ನೇ ಸ್ಥಾನ ಪಡೆದgಡೆ ಈ ಬಾರಿಯು ಶೇ.೫೮.೭೫ರಷ್ಟು -Àಲಿತಾಂಶ ಪಡೆದು ಕೊನೆ ಸ್ಥಾನಕ್ಕೆ ಪೈಪೋಟಿ ನೀಡುವಂತಾಗಿದೆ.
ಜಿಲ್ಲೆಯಲ್ಲಿ ಎಷÀÄ್ಟ ಪಿಯು ಕಾಲೇಜು?
ಜಿಲ್ಲೆಯಲ್ಲಿ ಸುಮಾರು ೧೮೮ ಪಿಯುಸಿ ಕಾಲೇಜುಗಳು ಇದ್ದು ಇದರಲ್ಲಿ ೮ ಅನುದಾನಿತವಾದರೆ ೪೩ ಸರ್ಕಾರಿ ಕಾಲೇಜುಗಳು ಹಾಗೂ ೧೩೭ ಖಾಸಗಿ ಕಾಲೇಜುಗಳಿವೆ. ಆದರೆ ೪೩ ಸರ್ಕಾರಿ ಕಾಲೇಜುಗಳ ಪೈಕಿ ಕೇವಲ ೦೪ ಕಾಲೇಜಿನಲ್ಲಿ ಮಾತ್ರ ಪ್ರಾಚಾರ್ಯರು ಇದ್ದು,೩೯ ಹುದ್ದೆಗಳು ಖಾಲಿ ಇವೆ. ಸರ್ಕಾರಿ ಕಾಲೇಜಿನಲ್ಲಿ ಅನ್ಯ ಜಿಲ್ಲೆಯವರು ೩೭೧ ಜೆ ಮೀಸಲಾತಿಯಲ್ಲಿ ಉದ್ಯೋಗ ಪಡೆದು ಜಿಲ್ಲೆಯಲ್ಲಿ ಒಂದು ವರ್ಷವಾದರು ಕೆಲಸ ಮಾಡದೆ ಸ್ವಂತ ಜಿಲ್ಲೆಗೆ ವರ್ಗವಣೆ ಮಾಡುವುದರಿಂದ ಶಿಕ್ಷಣ ಪಡೆಯುವ ಜಿಲ್ಲೆಯ ಪಿಯುಸಿ ವಿದ್ಯಾರ್ಥಿಗಳ ಮೇಳೆ ಭಾರಿ ಪೆಟ್ಟು ಬಿಳುತ್ತಿದೆ.ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಸುಮಾರು ೧೫ಕ್ಕೂ ಅಽಕ ಜನ ಉಪನ್ಯಾಸಕರು ಡೆಪ್ಯೂಟೇಷನ್ ಪಡೆದುಕೊಂಡಿದ್ದಾರೆ.
ಎಷ್ಟು ವಿದ್ಯಾರ್ಥಿಗಳು ಪಾಸ್
ಜಿ¯್ಲÉಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು ೨೨೨೩೭ ವಿದ್ಯಾರ್ಥಿಗಳು ದ್ವಿತೀಯ ಪರೀಕ್ಷೆ ಬರೆದಿದ್ದರು, ಈ ಪೈಕಿ ೧೮೪೧೪ ಜನ ಮೊದಲ ಬಾರಿಗೆ ಪರೀಕ್ಷೆ ಬರೆದಿದ್ದು, ಆದರೆ ಈ ಪೈಕಿ ಕೇವಲ ೧೦೮೧೮ ಜನ ವಿದ್ಯಾರ್ಥಿಗಳು ಮಾತ್ರ ತೆರ್ಗಡೆಯಾಗಿದ್ದಾರೆ.
ಆರ್ಥಿಕ ಸ್ಥಿತಿಗತಿ,ಉಪನ್ಯಾಸಕರ ಕೊರತೆ
ಜಿಲ್ಲೆಯನ್ನು ಅರ್ಥಿಕವಾಗಿ ಮುಂದು ಬರಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದರು ಯಾವುದು ಅಭಿವÊದ್ಧಿ ಹೊಂದುತಿಲ್ಲ ಹಾಗೂ ಜಿಲ್ಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಉಪನ್ಯಾಸಕರ ಕೊರತೆಯಿಂದ ಸಾಕಷ್ಟು ತೊಂದರೆ ಉಂಟಾಗುತ್ತಿದ್ದು,ಇದರಿAದ ಮಕ್ಕಳ ಕಲಿಕೆಯಲ್ಲಿ ಹಿಂದುಳಿದೆAದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ.ಜಿಲ್ಲೆಯಲ್ಲಿ ಸುಮಾರು೧೦೬ ಜನರ ಉಪನ್ಯಾಸಕರ ಕೊರತೆ ಇದ್ದು ,ಇರುವ ಕಾಲೇಜಿನಲ್ಲಿ ೨೨೧ ಖಾಯಂ ಉಪನ್ಯಾಸಕರ ಜತೆಗೆ ೧೪೧ ಜನ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ಬಡತನ ಮೂಲ ಸಮಸ್ಯೆ
ರಾಜ್ಯದಲ್ಲಿ ಪ್ರತಿವಷÀð ಶೇಕಡಾವಾರು ಸಂಖ್ಯೆ ಹೆಚ್ಚಳವಾಗುತ್ತದೆ ಆದರೆ ರಾಯಚೂರು ಜಿಲ್ಲೆ ಹಿಂದುಳಿದ ಹಣೆ ಪಟ್ಟಿ ಹೆಸರಿನಿಂದ ಶ್ರೀಮಂತರ ಮಕ್ಕಳು ಬೇರೆ ಜಿಲ್ಲೆಗಳಿಗೆ ವಿದ್ಯಾಭ್ಯಾಸ ಮಾಡಲು ತೆರಳುತ್ತಿದ್ದು,ಕೇವಲ ಗ್ರಾಮೀಣ ಭಾಗದ ಬಡವರ ಮಕ್ಕಳು ಮಾತ್ರ ಇಲ್ಲಿ ಅಭ್ಯಾಸ ಮಾಡುತ್ತಿದ್ದು ರಜೆ ಸಿಕ್ಕರೆ ಕೂಲಿ ಕೆಲಸಕ್ಕೆ ತೆರಳುತ್ತಾರೆ,ಇದರಿಂದ ಮಕ್ಕಳು ಹಣದ ಆಸೆಯಿಂದ ಕಾಲೇಜು ಕಡೆ ಬರುವುದಿಲ್ಲ ಹಾಗೂ ಪರೀಕ್ಷೆ ಸಂದರ್ಭದಲ್ಲಿ ಮಾತ್ರ ಬರುತ್ತಾರೆ ಇದರಿಂದ ಅಂಕಗಳ ಸಂಖ್ಯೆ ಕಡಿಮೆ ಆಗಿದೆ ಎನ್ನವ ಮಾಹಿತಿ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕೇಳಿ ಬರುತ್ತಿದೆ.
ಜಿಲ್ಲೆಯಲ್ಲಿ ಉಪನ್ಯಾಸಕರ ಕೊರತೆಯಿಂದ ಈ ಬಾರಿ ಶೇ.೫೮.೭೫ ರಷ್ಟು -Àಲಿತಾಂಶ ಪಡೆದಿದೆ. ನಮ್ಮಲ್ಲಿ ಉಪನ್ಯಾಸಕರ ಕೊರತೆ ಇದ್ದರು,ಇರುವ ಉಪನ್ಯಾಸಕರಿಂದ ಉತ್ತಮ -Àಲಿತಾಂಶ ದೊರೆಯಲು ಸಾಧ್ಯವಾಗಿದೆ.
ರಂಗಪ್ಪ ಪ್ರಾಬಾರಿ ಉಪನಿರ್ದೇಶಕರು ಡಿಡಿಪಿಯು ರಾಯಚೂರು
ವೈಷ್ಣವಿಗೆ ಸಿಎ ಅಗುವ ಆಸೆ
ನಿವೃತ ಬ್ಯಾಂಕ್ ಬ್ಯಾಂಕ್ ಮ್ಯಾನೇಜರ್ ಮಗಳು ವೈಷ್ಣವಿ ಅವರು ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ೫೮೭ (ಶೇ.೯೭.೮೩) ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಮೂಲತಃ ರಾಯಚೂರು ತಾಲೂಕಿನ ಗಾರಲದಿನ್ನಿ ಗ್ರಾಮದವರಾಗಿದ್ದು, ತಂದೆ ಬಸ್ಪ÷್ಪ ಅವರು ನಿವೃತ ಬ್ಯಾಂಕ್ ಮ್ಯಾನೇಜರ್‌ರಾಗಿ ಸೇವೆ ಸಲ್ಲಿಸಿ ಕೃಷಿ ಕಾರ್ಯದಲ್ಲಿ ಕುಟುಂಬ ತೊಡಗಿದೆ. ಇವರು ನಗರದ ಪೂರ್ಣಿಮ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಅಭ್ಯಾಸ ಮಾಡಿದ್ದು, ತಂದೆಯ ಆಸೆಯಂತೆ ಲೆಕ್ಕ ಪರಿಶೋಧನೆಯಲ್ಲಿ ಸಾಧನೆ ಮಾಡುವ ಕನಸು ಕಂಡಿದ್ದಾಳೆ.\