

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಗೌರವ ರಕ್ಷಾಧಿಕಾರಿಯಾಗಿರುವ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಭಾನುವಾರ ಸಂಜೆ ದೇವಾಲಯಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಜಯದೇವ ಖಂಡಿಗೆ, ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲಗುತ್ತು, ಕೋಶಾಧಿಕಾರಿ ಸೂರ್ಯನಾರಾಯಣ ಬಿ., ಆಡಳಿತ ಮಂಡಳಿ ಸದಸ್ಯ ಸೀತಾರಾಮ ನವಕಾನ, ಮಾಜಿ ಆಡಳಿತ ಮೊಕ್ತೇಸರ ಟಿ.ಕೆ.ನಾರಾಯಣ ಭಟ್, ಜೀರ್ಣೋದ್ಧಾರ ಸಮಿತಿ ಜತೆ ಕಾರ್ಯದರ್ಶಿ ಭಾಸ್ಕರ ಪಂಜಿತ್ತಡ್ಕ, ಗಣೇಶ ಪ್ರಸಾದ ಕಡಪ್ಪು, ಉದಯಶಂಕರ ಪಿ.ಎಸ್., ಸತೀಶ ಪುದ್ಯೋಡು, ಮಾತೃ ಸಮಿತಿ ಅಧ್ಯಕ್ಷೆ ವಿನಯ ಜೆ.ರೈ, ಕಾರ್ಯದರ್ಶಿ ಅನಿತಾ, ಕೋಶಾಧಿಕಾರಿ ಶೋಭಿತಾ ಪಂಜಿತ್ತಡ್ಕ ಮತ್ತಿತರರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಕಾಮಗಾರಿಗಳ ಕುರಿತು ವಿವರಿಸಿದರು.