ಎಡನೀರು ಶ್ರೀ ಚಾತುರ್ಮಾಸ್ಯ ಮಂಗಲೋತ್ಸವ

New Project (9)
Published on

ಕಾಸರಗೋಡು: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಐದನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಭಾನುವಾರ ಮೃತ್ತಿಕಾ ವಿಸರ್ಜನೆ ನಡೆಸುವ ಮೂಲಕ ಮಂಗಲೋತ್ಸವ ನಡೆಯಿತು.

ಬೆಳಗ್ಗೆ ಪ್ರಾತಃಕಾಲದ ಪೂಜೆ, ಸೀಮೋಲ್ಲಂನಾ, ಭಜನೆ ಹಾಗೂ 60 ದಿವಸಗಳಿಂದ ನಡೆದುಬರುತ್ತಿದ್ದ ಅಖಂಡ ಭಜನಾ ಸಂಕೀರ್ತನೆ ಸಮಾರೋಪಗೊಂಡಿತು.

ಸಭಾ ಕಾರ್ಯಕ್ರಮದಲ್ಲಿ ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅನುಗ್ರಹ ಭಾಷಣ ಮಾಡಿದರು. ಗೋಪಾಲಕೃಷ್ಣ ಭಟ್ ಎಡನೀರು ಆಶಯ ಭಾಷಣ ಮಾಡಿದರು. ಉದ್ಯಮಿ ಸುರೇಶ್ ನಾಯಕ್ ಪೂನಾ ಭಾಗವಹಿಸಿದ್ದರು. ವೇಣುಗೋಪಾಲ ವಂದಿಸಿದರು.

ಚಾತುರ್ಮಾಸ್ಯ ಎಂಬುದು ಭಕ್ತಿ ಸಾಂದ್ರತೆಯ ಪುಣ್ಯಕಾಲ. ಭಗವಂತ ಯೋಗ ನಿದ್ರೆಯಲ್ಲಿರುವ ಕಾಲ ಇದಾಗಿದೆ. ಕಲಿಗಾಲದಲ್ಲಿ ಯಜ್ಞತುಲ್ಯವಾದ ಭಜನೆಯು ಭಗವಂತನಿಗೆ ನಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಲಿರುವ ಮಾರ್ಗವಾಗಿದೆ. ಈ ಪುಣ್ಯಕಾಲದಲ್ಲಿ ಭಾಗಿಯಾಗಲು ಸಾಧ್ಯವಾಗಿರುವುದು ನಮ್ಮೆಲ್ಲರ ಪುಣ್ಯ.

ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಉಪ್ಪಳ ಕೊಂಡೆವೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net