

ಕಾಸರಗೋಡು: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ 5ನೇ ಚಾತುಮಾಸ್ಯ ವ್ರತಾಚರಣೆ ಅಂಗವಾಗಿ ಕಾಸರಗೋಡು ವಲಯ ಸಮಿತಿ ವತಿಯಿಂದ ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆ ಎಡನೀರು ಮಠಕ್ಕೆ ಸಮರ್ಪಿಸಲಾಯಿತು.
ಕಾಸರಗೋಡು ವಲಯ ಸಮಿತಿ ರಕ್ಷಾಧಿಕಾರಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ, ಅಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷ ಕೆ.ಎನ್.ರಾಮಕೃಷ್ಣ ಹೊಳ್ಳ, ಪ್ರಧಾನ ಕಾರ್ಯದರ್ಶಿ ಕೆ.ಜಗದೀಶ್ ಕೂಡ್ಲು, ಕಾರ್ಯದರ್ಶಿಗಳಾದ ಕಿಶೋರ್‌ಕುಮಾರ್, ಕೆ.ವಿ.ತಿರುಮಲೇಶ ಹೊಳ್ಳ, ಕೆ.ವಿ.ಶೇಷಾದ್ರಿ ಹೊಳ್ಳ, ಕೋಶಾಧಿಕಾರಿ ಗುರುಪ್ರಸಾದ್ ಕೋಟೆಕಣಿ, ಸೂರ್ಯಕಾಂತಿ, ಶ್ರೀಲತಾ, ರೂಪಕಲಾ ಹೊಳ್ಳ ಮೊದಲಾದವರಿದ್ದರು.
ಮಠದಲ್ಲಿ ಬೆಳಗ್ಗೆ ಶ್ರೀ ಕೋಮರಾಡಿ ದೈವಸ್ಥಾನ ಭಜನಾ ಸಂ, ಪೇಟೆ ಶ್ರೀ ವೆಂಕಟ್ರಮಣ ಸ್ವಾಮಿ ಮಹಿಳಾ ಭಜನಾ ಮಂಡಳಿಯಿಂದ ಭಜನೆ, ಶ್ರೀ ವೆಂಕಟ್ರಮಣ ಬಾಲಗೋಕುಲ ಮಕ್ಕಳಿಂದ ಕುಣಿತ ಭಜನೆ, ಹರಿದಾಸ ದಯಾನಂದ ಹೊಸದುರ್ಗ ಅವರಿಂದ ಹರಿಕಥೆ ನಡೆಯಿತು.