ಹೆಡಕನಹಳ್ಳಿ ಎಂಪಿಸಿಎಸ್ ಕಾಂಗ್ರೆಸ್ ತೆಕ್ಕೆಗೆ

hedaknalli election
Published on

ವಿಜಯವಾಣಿ ಸುದ್ದಿಜಾಲ ನಂದಗುಡಿ
ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಬೈಲನರಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಡಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ 11 ಮಂದಿ ನಿರ್ದೇಶಕರಾಗಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾದರು.
11 ನಿರ್ದೇಶಕ ಸ್ಥಾನಕ್ಕೆ 22 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಶಾಸಕ ಶರತ್ ಬಚ್ಚೇಗೌಡ ಬೆಂಬಲಿಗರು ಎಲ್ಲ ಸ್ಥಾನಗಳನ್ನು ತಮ್ಮದಾಗಿಸಿಕೊಂಡರು.
ನೂತನ ನಿರ್ದೇಶಕರಾಗಿ ಎಚ್.ಎನ್.ಬೈರೇಗೌಡ, ಶ್ರೀನಿವಾಸ್, ಎಚ್.ಸಿ.ಬೈರೇಗೌಡ, ಮುನಿರಾಜು, ಎಚ್.ಜೆ.ರಾಜೇಶ್, ಮಂಜುನಾಥ್, ಸಂಗೀತಾ, ವೆಂಕಟಲಕ್ಷ್ಮಮ್ಮ, ಸುಜಾತಾ, ಶಾಮಲಮ್ಮ, ಎಚ್.ಎ.ಪ್ರಕಾಶ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಚ್.ನಾಗರಾಜ್ ತಿಳಿಸಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್ ಮಾತನಾಡಿ, ಎಲ್ಲ ನಿರ್ದೇಶಕರು ತಮ್ಮ ಅಧಿಕಾರವಧಿಯಲ್ಲಿ ಎಲ್ಲರ ಸಹಕಾರದೊಂದಿಗೆ ಸಂಘವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸುವುದರ ಮೂಲಕ ರೈತರಿಗೆ ಸಿಗಬೇಕಾದ ಎಲ್ಲ ಸವಲತ್ತುಗಳನ್ನು ಪ್ರಾಮಾಣಿಕವಾಗಿ ಸಿಗುವಂತೆ ಶ್ರಮಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net