ಸೈಲ್‌ ಮನೆಯಲ್ಲಿ 6.75 ಕೆಜಿ ಬಂಗಾರದ ಬಂಗಾರ, ಕೋಟ್ಯಂತರ ನಗದು ವಶಕ್ಕೆ ಪಡೆದ ಇಡಿ

ed
Published on

ಕಾರವಾರ: ಶಾಸಕ ಸತೀಶ ಸೈಲ್‌ಮನೆಯಲ್ಲಿ ಒಟ್ಟು ಸುಮಾರು  ಕೋಟಿ ಕೋಟಿ ರೂ.ಗಳ ಚರ ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇಡಿ) ತಿಳಿಸಿದೆ.

ಆ.13 ಹಾಗೂ 14 ರಂದು 7 ಇಡಿ ಅಧಿಕಾರಿಗಳು ಕಾರವಾರದ ಸತೀಶ ಸೈಲ್ ಮನೆಯ ಮೇಲೆ ದಾಳಿ ನಡೆಸಿ ಸತತ 22 ಗಂಟೆಗಳ ಕಾಲ ಪರಿಶೀಲನೆ ನಡೆಸಿ ಮನೆಯಿಂದ ಒಟ್ಟು 3 ಟ್ರಂಕ್‌ಗಳಷ್ಟು ದಾಖಲೆಗಳು, ನಗದು ಹಾಗೂ ಬಂಗಾರವನ್ನು ಬೆಂಗಳೂರಿಗೆ ಸಾಗಿಸಿದ್ದರು ಶುಕ್ರವಾರ ಅದರ ಮೌಲ್ಯವನ್ನು ಬಹಿರಂಗ ಮಾಡಿದ್ದಾರೆ.

ಇಡಿ ಅಧಿಕೃತ ಎಕ್ಸ್ ಖಾತೆಯಲ್ಲಿ ಶುಕ್ರವಾರ ಈ ಮಾಹಿತಿ ಹಂಚಿಕೊಳ್ಳಲಾಗಿದೆ. ಬೆಂಗಳೂರಿನ ಇಡಿ ಅಽಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಕಾರವಾರ, ಗೋವಾ, ಮುಂಬೈ ಹಾಗೂ ಹೊಸದೆಹಲಿಯಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು ಎಂದು ವಿವರಿಸಲಾಗಿದೆ.

ಈ ಅವಧಿಯಲ್ಲಿ 1.68 ಕೋಟಿ ರೂ. ನಗದು, 6.75 ಕೆಜಿ ಬಂಗಾರದ ಆಭರಣಗಳು, ಹಾಗೂ ಬಂಗಾರದ ಘಟ್ಟಿಗಳು ಮತ್ತು ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 14.13 ಕೋಟಿ ರೂ.ಮೌಲ್ಯದ ಹಣವನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ದೋಷಾರೋಪ ಹೊರಿಸಬಹುದಾದ ಸಾಕಷ್ಟು ದಾಖಲೆಗಳು ಇ-ಮೇಲ್ ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗಿದೆ ಎಂದು ವಿವರಿಸಲಾಗಿದೆ.

ಸತೀಶ ಸೈಲ್ ಹಾಗೂ ಇತರರು ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಶಿಕ್ಷೆಗೊಳಗಾಗಿದ್ದಾರೆ ಎಂದು ಇಡಿ ತಿಳಿಸಿದ್ದು, ಇದೇ ವಿಚಾರವಾಗಿ ಹುಡುಕಾಟ ನಡೆಸಲಾಗಿದೆ ಎಂದು ಇಡಿ ಮಾಹಿತಿ ಹಂಚಿಕೊಂಡಿದೆ.

ಆಸ್ಪತ್ರೆಯಲ್ಲಿದ್ದಾರೆ:

ಸತೀಶ ಸೈಲ್ ಅವರಿಗೆ ತೀವ್ರ ಅನಾರೋಗ್ಯವಿದ್ದು ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು. ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು. ಅವರು, ಅವರು ಇಡಿ ದಾಳಿ ನಡೆಯುವ ಹಿಂದಿನ ದಿನವೇ ದೆಹಲಿಗೆ ತೆರಳಿದ್ದರು. ಸೈಲ್ ರಾಜಕೀಯಕ್ಕೆ ಬರುವ ಮುಂಚಿನಿಂದಲೇ ಆಸ್ತಿವಂತರು. 500 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ವರ್ಷಕ್ಕೆ 150 ಕೋಟಿ ರೂ. ಆದಾಯ ತೆರಿಗೆ ಕಟ್ಟಿದ್ದಾರೆ. ಈಗಲೂ ಇಡಿ ವಶಪಡಿಸಿಕೊಂಡ ಹಣಕ್ಕೆ ದಾಖಲೆ ಕೊಡುತ್ತಾರೆ ಎಂದರು.

ಸತೀಶ ಸೈಲ್ ನನ್ನ ಸ್ನೇಹಿತರು. ಅವರ ಮನೆಯ ಮೇಲೆ ಇಡಿ ದಾಳಿ ನಡೆದಿರುವುದು ಬೇಸರವಾಗಿದೆ. ಯಾರು ಮತ್ತೊಮ್ಮೆ ಗೆಲ್ಲುವ ಸಾಮರ್ಥ್ಯ ಹೊಂದಿದ ನಾಯಕರಿದ್ದಾರೋ ಅಂಥವರ ಮನೆಯ ಮೇಲೆ ಇಡಿ ದಾಳಿ ನಡೆಸುವ ಪರಿಪಾಠ ದೇಶಾದ್ಯಂತ ನಡೆದಿದೆ. ಸೈಲ್ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಸಿಕೊಳ್ಳಲು ಪ್ರಯತ್ನ ನಡೆದಿರಬಹುದು. ಏಕೆಂದರೆ ಉತ್ತರ ಕನ್ನಡದಲ್ಲಿ ಬಿಜೆಪಿ ಶಕ್ತಿ ಕಡಿಮೆ ಇದೆ. ಮೊದಲು ಬಿಜೆಪಿಯ ಇಬ್ಬರು ಶಾಸಕರಿದ್ದರು. ಈಗ ಒಬ್ಬರೇ ಉಳಿದಿದ್ದಾರೆ ಎಂದರು. ವಾಷಿಂಗ್ ಮಷಿನ್‌ನಲ್ಲಿ ಬಟ್ಟೆ ಹಾಕಿ ತೆಗೆದಾಗ ಸ್ವಚ್ಛವಾಗಿ ಬರುವಂತೆ ಬಿಜೆಪಿಗೆ ಸೇರಿದರೆ ರಾಜಕಾರಣಿಗಳು ಪರಿಶುದ್ಧವಾಗಿಬಿಡುತ್ತಾರೆ. ಅವರ ಮೇಲಿನ ಆರೋಪಗಳೆಲ್ಲ ಮಾಯವಾಗಿಬಿಡುತ್ತವೆ ಎಂದು ಲೇವಡಿ ಮಾಡಿದರು.

ಮತ್ತೆ ಕಾರವಾರ ಕ್ಷೇತ್ರ ಅನಾಥ..?

2013 ರಲ್ಲಿ ಪಕ್ಷೇತರವಾಗಿ ಗೆದ್ದು ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕರಾಗಿದ್ದ ಸತೀಶ ಸೈಲ್ ಅಕ್ರಮ ಅದಿರು ಪ್ರಕರಣದಲ್ಲಿ 11 ತಿಂಗಳು ಜೈಲು ಸೇರಿದ್ದರು. 2024 ರಲ್ಲಿ ಜನಪ್ರತಿನಿಽಗಳ ವಿಶೇಷ ನ್ಯಾಯಾಲಯ ಸೈಲ್ ಸೇರಿ ಇತರರನ್ನು ಅಪರಾಧಿ ಎಂದು ಪರಿಗಣಿಸಿ 7 ವರ್ಷ ಶಿಕ್ಷೆ ಪ್ರಕಟಿಸಿದೆ. ಸೈಲ್ ವಿರುದ್ಧದ ತೀರ್ಪಿಗೆ ಹೈಕೋರ್ಟ್ ಸದ್ಯ ತಡೆ ನೀಡಿದೆ. ಕೆಲ ಕಾಲ ಜೈಲುವಾಸ ಅನುಭವಿಸಿ ಸೈಲ್ ಹೊರ ಬಂದಿದ್ದಾರೆ. ಆದರೆ, ಈಗ ಸೈಲ್‌ಗೆ ಇನ್ನೊಂದು ಕಂಠಕ ಎದುರಾಗಿದೆ. ಕ್ಷೇತ್ರದ ಜನರಿಗೆ ಶಾಸಕರು ಇನ್ನೊಮ್ಮೆ ಕೈಗೆ ಸಿಗದಂತಾಗುತ್ತಾರಾ ಎಂಬ ಆತಂಕ ಕಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net