ಕ್ಯಾಸಿನೋ ಮಾಲೀಕ ಸಮುಂದರ್ ಸಿಂಗ್ ಮನೆ ಮೇಲೆ ಇಡಿ ದಾಳಿ

raid
Published on

ಹುಬ್ಬಳ್ಳಿ: ಉದ್ಯಮಿ ಸಮುಂದರ್ ಸಿಂಗ್ ಇವರ ಇಲ್ಲಿಯ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ಶುಕ್ರವಾರ ಬೆಳಗ್ಗೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದೆ.

ಎರಡು ವಾಹನಗಳಲ್ಲಿ ಬಂದ ಅಧಿಕಾರಿಗಳು ದೇಶಪಾಂಡೆನಗರ ಕಾಮಾಕ್ಷಿ ಅಪಾರ್ಟಮೆಂಟ್​ನ 5ನೇ ಮಹಡಿಯಲ್ಲಿ ವಾಸವಿದ್ದ ಸಮುಂದರ್ ಸಿಂಗ್ ನಿವಾಸದ ಮೇಳೆ ದಾಳಿ ನಡೆಸಿದರು. ಬಹಳ ಸಮಯದವರೆಗೂ ಬಾಗಿಲು ತೆರೆಯದಿದ್ದಾಗ ಅಧಿಕಾರಿಗಳು ಬಾಗಿಲು ಮುರಿದು ಒಳ ಪ್ರವೇಶಿಸಿದ್ದಾರೆ. ಸಂಜೆಯವರೆಗೂ ಬಾಗಿಲು ಬಂದ ಮಾಡಿ ಪರಿಶೀಲನೆ ನಡೆಸಲಾಗಿದೆ.

ಸಮುಂದರ್​ಸಿಂಗ್ ಗೋವಾ ಹಾಗೂ ಶ್ರೀಲಂಕಾ ದೇಶದಲ್ಲಿ ಕ್ಯಾಸಿನೋ ಹೊಂದಿದ್ದಾನೆ. ಅಲ್ಲದೆ, ಮೊಬೈಲ್ ಗೇಮ್ ಆಪ್​ಗಳನ್ನು ಹೊಂದಿದ್ದ ಎನ್ನಲಾಗುತ್ತಿದೆ. ಇಡಿ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ಗೋವಾದ ಪಣಜಿ ಮತ್ತು ಕಲನಗುಟನ ವಿವಿಧೆಡೆ 7 ಕ್ಯಾಸಿನೋ ಮೇಲೆ ದಾಳಿ ನಡೆಸಿದ್ದಾರೆ. ಇದೇ ವೇಳೆ ಸಮುಂದರ್ ಸಿಂಗ್ ಹುಬ್ಬಳ್ಳಿಯಲ್ಲಿ ಇರುವುದನ್ನು ಖಚಿತಪಡಿಸಿಕೊಂಡು ಇನ್ನೊಂದು ತಂಡ ಇಲ್ಲಿ ದಾಳಿ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net