ತೀರ್ಥಹಳ್ಳಿ: ನ್ಯಾಷನಲ್ ಸಮೂಹ ಸಂಸ್ಥೆ ಮೇಲೆ ಇಡಿ ದಾಳಿ

2 smg 5 (1)
ತಪಾಸಣೆಗೆಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನ್ಯಾಷನಲ್ ಗೋಲ್ಡ್ ಸಂಸ್ಥೆಯ ಬಾಗಿಲು ಮುಚ್ಚಿಸಿರುವುದು.
Published on

ತೀರ್ಥಹಳ್ಳಿ: ಪಟ್ಟಣದ ನ್ಯಾಷನಲ್ ಸಮೂಹ ಸಂಸ್ಥೆಗಳು ಮತ್ತು ಸಂಸ್ಥೆಯ ಪಾಲುದಾರರ ನಿವಾಸದ ಮೇಲೆ ಮಂಗಳವಾರ ಬೆಳ್ಳಂಬೆಳಗ್ಗೆ ಜಾರಿ ನಿರ್ದೇಶನಾಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಂಜೆಯಾದರೂ ಅಧಿಕಾರಿಗಳ ತಂಡದಿಂದ ದಾಖಲೆಗಳ ಪರಿಶೀಲನೆ ಮುಂದುವರಿದಿತ್ತು.

10 ವಾಹನಗಳಲ್ಲಿ ಆಗಮಿಸಿದ ಅಧಿಕಾರಿಗಳು ನಾಲ್ಕು ತಂಡಗಳಾಗಿ ನ್ಯಾಷನಲ್ ಗೋಲ್ಡ್ ಪ್ಯಾಲೇಸ್, ಸೂಪರ್ ಬಜಾರ್, ಎಲ್‌ಪಿಜಿ ಗೋದಾಮಿನ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದರು. ವ್ಯವಹಾರಿಕವಾಗಿ ನ್ಯಾಷನಲ್ ಸಂಸ್ಥೆಯೊಂದಿಗೆ ತೊಡಗಿಸಿಕೊಂಡವರಿಗೂ ಇಡಿ ಅಧಿಕಾರಿಗಳು ದಾಳಿಯ ಶಾಕ್ ನೀಡಿದರು. ಏಕಕಾಲಕ್ಕೆ ನಡೆದ ಇಡಿ ದಾಳಿ ಪಟ್ಟಣದಲ್ಲಿ ಸಂಚಲನ ಮೂಡಿಸಿದೆ.
ನಿರ್ಮಾಣ ಕಾಮಗಾರಿಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿರುವ ನ್ಯಾಷನಲ್ ಸಂಸ್ಥೆ ಬೃಹತ್ ಕಾಮಗಾರಿಗಳನ್ನೂ ನಿರ್ವಹಣೆ ಮಾಡಿದೆ. ಹಲವು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ಬಳಿಕ ಮೊದಲ ಬಾರಿಗೆ ಶಿವಮೊಗ್ಗ ಏರ್‌ಪೋರ್ಟ್ ನಿರ್ಮಾಣ ಮಾಡಿದ್ದ ಸಂಸ್ಥೆ ಪ್ರಸ್ತುತ ಹಾಸನ ವಿಮಾನ ನಿಲ್ದಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದೆ.
ಗುತ್ತಿಗೆದಾರರಾಗಿ ಮಾತ್ರವಲ್ಲದೇ ನ್ಯಾಷನಲ್ ಸಂಸ್ಥೆಯ ಸಹೋದರರು ವಿವಿಧ ವ್ಯವಹಾರಗಳಲ್ಲಿ ತೊಡಗಿಸಿಕೊಂಡು ಯಶಸ್ವಿ ಉದ್ಯಮಿಗಳೆನಿಸಿಕೊಂಡಿದ್ದಾರೆ. ಈಗ ಜಾರಿ ನಿರ್ದೇಶನಾಲಯದ ದಾಳಿ ನಡೆಯಲು ಕಾರಣವೇನು? ದಾಳಿಯಲ್ಲಿ ಪತ್ತೆಯಾದ ವಿವರಗಳೇನು? ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net