

ಹುಬ್ಬಳ್ಳಿ : ಸ್ಟಾರ್ ಏರ್ಲೈನ್ಸ್ ಮಾಲೀಕ ಸಂಜಯ್ ಘೊಡಾವತ್ ಜತೆ ಸ್ನೇಹ ಬೆಳೆಸಿದ್ದ ಆರೋಪಿಗಳಿಬ್ಬರ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿದ್ದು, ವಂಚನೆ ಪ್ರಕರಣವು ಇನ್ನೂ ರ್ತಾಕ ಅಂತ್ಯ ಕಂಡಿಲ್ಲ.
ಸಂಜಯ್ ಸ್ನೇಹ ಬೆಳೆಸಿದ್ದ ಶೀತಲ್ಕುಮಾರ್, ಜಿನೇಂದ್ರ ಮಗ್ದುಮ್ ಅವರು ರಿಯಲ್ ಎಸ್ಟೇಟ್ ಉದ್ಯಮದ ಹೆಸರಲ್ಲಿ ವಂಚಿಸಿದ್ದರು. ಬರೋಬ್ಬರಿ 525 ಕೋಟಿ ರೂ.ಯನ್ನು ತಮ್ಮ ವೈಯಕ್ತಿಕ ಖಾತೆ ಹಾಗೂ ಇತರ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದರು. ಹಣದ ವ್ಯವಹಾರಗಳ ಮೇಲೆ ಅನುಮಾನ ಬರುತ್ತಿದ್ದಂತೆ ಸಂಜಯ್ ಘೊಡಾವತ್, ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ವಂಚನೆ ದೂರು ದಾಖಲಿಸಿದ್ದರು. ಅಶೋಕ ನಗರ ಠಾಣೆ ಪೊಲೀಸರು ಇದನ್ನು ಮೊದಲು ಸಿಐಡಿಗೆ ವಹಿಸಿದ್ದರು. ಬಹುಕೋಟಿ ವಂಚನೆ ಆಗಿದ್ದರಿಂದ ನಂತರ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಹಸ್ತಾಂತರಿಸಲಾಗಿತ್ತು.
ಪ್ರಕರಣದ ಬೆನ್ನು ಹತ್ತಿದ್ದ ಇಡಿ ಅಧಿಕಾರಿಗಳು, ಶೀತಲ್ಕುಮಾರ, ಜಿನೇಂದ್ರ ಮಗ್ದುಮ್ ಅವರಿಗೆ ಸೇರಿದ ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶದಲ್ಲಿನ ಒಟ್ಟು 4.22 ಕೋಟಿ ರೂ. ಆಸ್ತಿ ಲಾಕ್ ಮಾಡಿದ್ದಾರೆ. ಅಂದರೆ ಬೋಜಾ ಕೂಡಿಸಲಾಗಿದೆ ಎನ್ನಲಾಗುತ್ತಿದೆ.
ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಇಡಿ ತನಿಖೆ ನಡೆಸುತ್ತಿದೆ. ಸದ್ಯ ಇಬ್ಬರು ಉದ್ಯಮಿಗಳ ಮನೆ, ಅಪಾರ್ಟ್ವೆುಂಟ್, ವಿಂಡ್ವಿುಲ್ ಸೇರಿ ಒಟ್ಟು 12 ಆಸ್ತಿಗಳನ್ನು ವಶಕ್ಕೆ ಪಡೆದಿದೆ. ಆಸ್ತಿ ಪರಾಭಾರೆ, ವರ್ಗಾವಣೆ ಸೇರಿ ಇತರ ಯಾವುದೇ ಹಕ್ಕು ಸ್ವಾಮ್ಯ ಬೇರೆಯವರು ಹೊಂದದಂತೆ ನಿರ್ಬಂಧ ವಿಧಿಸಿದೆ.
ಇನ್ನಷ್ಟು ಚುರುಕು: ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಇಡಿ ಅಧಿಕಾರಿಗಳನ್ನು ಇನ್ನಷ್ಟು ತನಿಖೆ ಚುರುಕುಗೊಳಿಸಿದ್ದಾರೆ. ಬಹುಕೋಟಿ ವಂಚನೆ ಪ್ರಕರಣವಾಗಿದ್ದರಿಂದ ಯಾವ ಮೂಲದಿಂದ ಹಣ ಬಂದಿದೆ?, ಎಲ್ಲಿಗೆ ಹಣ ವರ್ಗಾವಣೆ ಆಗಿದೆ? ಇದರ ಹಿಂದೆ ಯಾರ ಕೈವಾಡವಿದೆ? ಎಂಬುದರ ಲೆಕ್ಕಾಚಾರವನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಡುತ್ತಿದ್ದಾರೆ. ಈಗ ಆಸ್ತಿ ವರ್ಗಾವಣೆ ನಿರ್ಬಂಧಿಸಿದ್ದರಿಂದ ಇನ್ನಷ್ಟು ಸಾಕ್ಷ್ಯ್ಕಾಗಿ ಅಧಿಕಾರಿಗಳು ತನಿಖೆಯಲ್ಲಿ ತೊಡಗಿದ್ದಾರೆ.