ಕೊಪ್ಪಳದಾದ್ಯಂತ ಸಂಭ್ರಮದ ಈದ್​ ಆಚರಣೆ

ed festival celebration koppal
Published on

ಕೊಪ್ಪಳ: ಪ್ರವಾದಿ ಮೊಹ್ಮದ್​ ಪೈಗಂಬರ ಅವರ ಜನ್ಮ ದಿನ ಅಂಗವಾಗಿ ನಗರ ಸೇರಿ ಗ್ರಾಮೀಣ ಭಾಗಗಳಲ್ಲಿ ಸೋಮವಾರ ಸಂಭ್ರಮದ ಈದ್​ ಹಬ್ಬ ಆಚರಿಸಲಾಯಿತು.

ಭಾನುವಾರದಿಂದಲೇ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಮಸೀದಿಗಳಲ್ಲಿ ಜಾಗರಣೆ, ಸಾಮೂಹಿಕ ಪ್ರಾರ್ಥನೆ ನಡೆದವು. ಸಾರ್ವಜನಿಕರು ಶ್ರದ್ಧಾಭಕ್ತಿಯಿಂದ ಅಲ್ಲಾಹುವಿಗೆ ನಮಿಸಿದರು. ಸೋಮವಾರ ಬೆಳಗ್ಗೆ ಗೌರಿ ಅಂಗಳದಿಂದ ಶುರುವಾರ ಮೆರವಣಿಗೆ ಗಡಿಯಾರ ಕಂಬ ವೃತ್ತ, ಶಾರದಾ ಚಿತ್ರಮಂದಿರ, ಸಾಲಾರಜಂಗ್​ ರಸ್ತೆ, ಅಶೋಕ ವೃತ್ತ, ಜವಾಹರ ರಸ್ತೆ ಮೂಲಕ ಯೂಸೂಫಿಯಾ ಮಸೀದಿವರೆಗೆ ಶಾಂತಿಯಿಂದ ಸಾಗಿತು.

ಹಿರಿ-ಕಿರಿಯರು, ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡರು ಮೆರಗು ತಂದರು. ಇಸ್ಲಾಂ ಧರ್ಮದ ಬಾವುಟ, ಮೆಕ್ಕಾ, ಮದಿನಾ ಸ್ಥಬ್ಧ ಚಿತ್ರಗಳು ನೋಡುಗರನ್ನು ಸೆಳೆದವು. ಪೈಗಂಬರ್​ ಸಂದೇಶಗಳನ್ನು ಹಿಡಿದು ಜಾಗೃತಿ ಮೂಡಿಸಿದರು. ದಾರಿಯುದ್ದಕ್ಕೂ ಅಲ್ಲಲ್ಲಿ ಮೆರವಣಿಗೆ ಹೊರಟವರಿಗೆ ಹಣ್ಣು, ಜ್ಯೂಸ್​, ಶರಬತ್​ ನೀಡಲಾಯಿತು. ಸಂಸದ ರಾಜಶೇಖರ ಹಿಟ್ನಾಳ್​, ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​, ಮಾಜಿ ಸಂಸದ ಸಂಗಣ್ಣ ಕರಡಿ ಸೇರಿ ಇತರ ನಾಯಕರು ಮೆರವಣಿಗೆಯಲ್ಲಿ ಭಾಗಿಯಾಗಿ ಶುಭ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net