

ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ವತಿಯಿಂದ 9ನೇ ಆವೃತ್ತಿಯ ಎಕೊನೋವನ್ಜಾ ಅಂತರ್ ಕಾಲೇಜು ಸ್ಪರ್ಧಾ ಕಾರ್ಯಕ್ರಮ ಕಾಲೇಜಿನ ಎಲ್. ಎಫ್. ರಸ್ಕಿನ್ಹಾ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಕರ್ನಾಟಕ ಸ್ಟೇಟ್ ಪ್ಲಾನಿಂಗ್ ಬೋರ್ಡ್ ನ ಸದಸ್ಯ ಡಾ. ಜಿ. ವಿ. ಜೋಶಿ ಅವರು ಪಿಗ್ಗಿ ಬ್ಯಾಂಕ್‌ಗೆ ನಾಣ್ಯ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಅರ್ಥಶಾಸ್ತ್ರವು ಆರೋಗ್ಯ, ಜೀವಶಾಸ್ತ್ರ, ಸಂವಿಧಾನಗಳಂತಹ ವಿಷಯಗಳಿಗೂ ಸಂಬಂಧಿಸಿದೆ. ಜೀವನದ ಪ್ರತೀ ಹಂತದಲ್ಲೂ ಅರ್ಥಶಾಸ್ತ್ರದ ವಿಚಾರಗಳು ಹನುಭವಕ್ಕೆ ಬರಲಿದೆ ಎಂದರು.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪ್ರವೀಣ್ ಪಾರ್ಟೀಸ್ ಎಸ್.ಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಝೇವಿಯರ್ ಬ್ಲಾಕ್‌ನ ನಿರ್ದೇಶಕ ಡಾ. ನಾರಾಯಣ್ ಭಟ್, ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮನೋಹರ್ ವಿ. ಸೆರ್ರಾವೋ, ಅಡ್ಮಿನ್ ಬ್ಲಾಕ್ ನಿರ್ದೇಶಕ ಡಾ. ಚಾರ್ಲ್ಸ್ ವಿ. ಫುರ್ಟಾಡೊ, ಸಿಬ್ಬಂದಿ ಸಂಯೋಜಕರಾದ ಡಾ. ಆಲ್ವಿನ್ ಮಿಸ್ಕಿತ್, ರೆಜಿ ಜಾನ್, ಕವಿತಾ, ವಿದ್ಯಾರ್ಥಿ ಸಂಯೋಜಕರಾದ ಪ್ರಥಮ್ ಶೆಟ್ಟಿ ಮತ್ತು ಶೈನಲ್ ಪಿಂಟೋ ಸಹಿತ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭ ನಟ ಪೃಥ್ವಿ ಅಂಬರ್ ತಮ್ಮ ಮತ್ಸ್ಯಗಂಧ ಸಿನಿಮಾದ ನಿರ್ದೇಶಕ ದೇವರಾಜ್ ಪೂಜಾರಿ ಹಾಗೂ ಚಿತ್ರತಂಡದೊಂದಿಗೆ ಚಲನಚಿತ್ರದ ಬಿಡುಗಡೆ ಬಗ್ಗೆ ಮಾಹಿತಿ ನೀಡಿದರು. ನಟ ಅನೂಪ್ ಸಾಗರ್, ಎಡುಸ್ಫಿಯರ್ ಓವರ್ಸೀಸ್‌ನ ಮ್ಯಾನೇಜಿಂಗ್ ನಿರ್ದೇಶಕ ಕೃಷ್ಣಕುಮಾರ್ ಪಿಪಿ ಇದ್ದರು.
ಸಂತ ಅಲೋಶಿಯಸ್ ಚಾಂಪಿಯನ್
ವಿವಿಧ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ, ಟರ್ನ್ ಕೊಟ್, ಮ್ಯಾಡ್ ಆಡ್, ಬಜೆಟ್ ತಯಾರಿಕೆ, ಕೊಲಾಜ್, ಪ್ರತಿಕೃತಿ, ರಸಪ್ರಶ್ನೆ, ಫ್ಯಾಷನ್ ಶೋ, ಮೋಕ್ಲಮೇಷನ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ 17 ಕಾಲೇಜುಗಳು ಭಾಗವಹಿಸಿದ್ದು, ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಚಾಂಪಿಯನ್‌ಶಿಪ್ ಪ್ರಶಸ್ತಿ ಪಡೆದರೆ, ಉಜಿರೆಯ ಎಸ್. ಡಿ.ಎಂ ಪದವಿ ಕಾಲೇಜು ಎರಡನೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.