

ಹುಬ್ಬಳ್ಳಿ: ಚಿನ್ನ, ಬೆಳ್ಳಿ ಹಾಗೂ ವಜ್ರದ ಆಭರಣಗಳ ಹೆಸರಾಂತ ಮಾರಾಟ ಮಳಿಗೆ ಜೋಯಾಲುಕ್ಕಾಸ್ ಸಿಎಸ್ಆರ್ ನಿಧಿ ಅಡಿಯಲ್ಲಿ ಬಡವರಿಗೆ ಹೊಸ ಮನೆಗಳನ್ನು ಕಟ್ಟಿಕೊಡಲಾಗಿದೆ.
ಧಾರವಾಡ ಜಿಲ್ಲೆಯ ಐದು ಗ್ರಾಮಗಳಲ್ಲಿ ಬಿದ್ದು ಹೋಗಿರುವ ಮನೆಗಳ ಬದಲಿಗೆ ಹೊಸದಾಗಿ ಐದು ಮನೆಗಳನ್ನು ಜೋಯಾಲುಕ್ಕಾಸ್ ಕಂಪನಿ ನಿರ್ಮಿಸಿ ಕೊಡುತ್ತಿದೆ.
ಕಳಸದ ಅಂಜನಾ ಬಡಿಗೇರ, ಅಲ್ಲಾಪುರದ ಲಲಿತವ್ವ ಮಲ್ಲಯ್ಯ, ಸುಳ್ಳದ ಶಾಂತವ್ವ ಮಲಸರಿ, ಭದ್ರಾಪುರದ ಬಾಬುಸಾಬ ಚಿನ್ನೂರ ಹಾಗೂ ಅಗಡಿಯ ಲಕ್ಷ್ಮಿ ಈರಪ್ಪ ಹಡಪದ ಅವರಿಗೆ ಆರ್ಥಿಕ ನೆರವು ನೀಡಲಾಯಿತು.
ಇವರಿಗೆ ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಚೆಕ್ ಗಳನ್ನು ಹುಬ್ಬಳ್ಳಿಯ ಜೋಯಾಲುಕ್ಕಾಸ್ ಮಳಿಗೆಯಲ್ಲಿ ವಿತರಣೆ ಮಾಡಲಾಯಿತು.
ಸಬ್ ಇನ್ಸಪೆಕ್ಟರ್ ವಿನೋದ ಪಿ.ಡಿ. ಅವರು ಫಲಾನುಭವಿಗಳಿಗೆ ಚೆಕ್ ಹಸ್ತಾಂತರಿಸಿದರು.
ಹುಬ್ಬಳ್ಳಿ ಶಾಖೆ ವ್ಯವಸ್ಥಾಪಕ ಚಂದ್ರಶೇಖರ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.