ಗ್ರಾಮಾಭಿವೃದ್ಧಿ ಯೋಜನೆಯಿಂದ ಆರ್ಥಿಕ ಸ್ವಾವಲಂಬನೆ

19 nrp 1
Published on

ಎನ್.ಆರ್.ಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭವಾದ ನಂತರ ರಾಜ್ಯಾದ್ಯಂತ ಗ್ರಾಮಗಳು, ಸಂಘದ ಸದಸ್ಯರ ಮನೆ, ಕುಟುಂಬಗಳು ಅಭಿವೃದ್ಧಿ ಹೊಂದಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿಕ್ಕಮಗಳೂರು ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರಾ ತಿಳಿಸಿದರು.
ಕುದುರೆಗುಂಡಿಯಲ್ಲಿ ಯೋಜನೆಯ ಕೊಪ್ಪ ,ಎನ್.ಆರ್.ಪುರ ತಾಲೂಕು ವ್ಯಾಪ್ತಿಯ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಮಾತನಾಡಿ, 42 ವರ್ಷಗಳ ಹಿಂದೆ ಬೆಳ್ತಂಗಡಿಯಲ್ಲಿ ಯೋಜನೆ ಪ್ರಾರಂಭವಾಯಿತು. ಈ ಭಾಗದಲ್ಲಿ 17 ವರ್ಷಗಳ ಹಿಂದೆ ಪ್ರಾರಂಭವಾಗಿದೆ. ಈಗ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಯೋಜನೆ ಆರಂಭಗೊಂಡಿದೆ. ಈಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರು ಸಾಮಾಜಿಕ, ಆರ್ಥಿಕವಾಗಿ ಬೆಳೆವಣಿಗೆ ಹೊಂದಿದ್ದಾರೆ. ಮಹಿಳೆಯರು ಧೈರ್ಯದಿಂದ ಎಲ್ಲ ವ್ಯವಹಾರಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಸಂಘದ ಸದಸ್ಯರು ಶಿಸ್ತಿನಿಂದ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
ಕೊಪ್ಪ ಆರ್‌ಬಿಎಸ್‌ಕೆ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರೂಪ ಮಾತನಾಡಿ, ಮಹಿಳೆಯರು ಯಾವುದೇ ಸಮಸ್ಯೆ ಎದುರಾದರೂ ಆತ್ಮವಿಶ್ವಾಸದಿಂದ ಮೆಟ್ಟಿ ನಿಲ್ಲಬೇಕು. ಮಹಿಳೆಯರ ಸಬಲೀಕರಣವಾಗಿದ್ದು ಇದಕ್ಕಾಗಿ ಮಹಿಳೆಯರು ಹೆಮ್ಮೆ ಪಡಬೇಕು. ಮಹಿಳೆಯರು ಆರೋಗ್ಯವಾಗಿದ್ದರೆ ಮಾತ್ರ ಎಲ್ಲ ಸಮಸ್ಯೆಗೂ ಪರಿಹಾರ ಸಿಗಲಿದೆ. ಇತ್ತೀಚಿನ ವರ್ಷಗಳಲ್ಲಿ ಕಳಪೆ ಹಾಗೂ ಅಸಮರ್ಪಕ ಆಹಾರ ಸೇವನೆ, ಜೀವನದ ಶೈಲಿ ಬದಲಾಗಿರುವುದರಿಂದ ಮಹಿಳೆಯರಿಗೆ ರಕ್ತ ಹೀನತೆ, ಮಾನಸಿಕ ಖಿನ್ನತೆ, ಋತುಚಕ್ರದಲ್ಲಿ ಬದಲಾವಣೆ, ಶ್ವಾಸಕೋಶ, ಸ್ತನ ಕ್ಯಾನ್ಸರ್ ಕಾಣಿಸುತ್ತಿದೆ. ಕ್ಯಾನ್ಸರ್‌ಎಂದರೆ ಭಯ ಪಡದೆ ಪ್ರಾರಂಭದಲ್ಲೇ ಕಾಯಲೆ ಗುರುತಿಸಿ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net