

ಕಾರಟಗಿ: ಮಹಾತ್ಮರ ತ್ಯಾಗ, ಬಲಿದಾನಗಳನ್ನು ನಾವುಗಳು ಇಂದಿಗೂ ಸ್ಮರಿಸಬೇಕು ಎಂದು ತಹಸೀಲ್ದಾರ್ ಎಂ.ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಸಿದ್ಧೇಶ್ವರ ರಂಗಮಂದಿರದಲ್ಲಿ ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಮುಂಚೆ ದೇಶದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿರಲಿಲ್ಲ. ಮೊದಲು ಪರಕೀಯರ ಆಡಳಿತ ಹಾಗೂ ರಾಜಮನೆತನಗಳ ಆಡಳಿತ ನಡೆಸುತ್ತಿದ್ದವು. ಎಲ್ಲವನ್ನು ಒಟ್ಟುಗೂಡಿಸಿ ಗಣರಾಜ್ಯವನ್ನಾಗಿ ಮಾಡಲಾಯಿತು.
ಇಂದು ನಮಗೆ ನಾವೇ ಶಕ್ತಿ ಕೊಟ್ಟುಕೊಂಡ ಮಹಾದಿನ. ಇದನ್ನು ನಾವೆಲ್ಲರೂ ಬಹಳ ಸಂಭ್ರಮದಿಂದ ಆಚರಿಸಬೇಕು. ದೇಶಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿಕೊಟ್ಟಿದ್ದಾರೆ. ಮಹಾತ್ಮ ಗಾಂಧಿ, ಸುಭಾಷ್ ಚಂದ್ರಬೋಸ್, ಬಾಲಾ ಗಂಗಾಧರ್ ತಿಲಕ್, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿ ಅನೇಕರು ಸ್ವಾತಂತ್ರ್ಯಕ್ಕಾಗಿ ಜೀವವನ್ನು ಲೆಕ್ಕಿಸದೆ ಹೋರಾಡಿದ್ದಾರೆ.
ದೇಶದ ಆರ್ಥಿಕ ಪ್ರಗತಿಗೆ ಯುವ ಸಮುದಾಯ ಮುಂದಾಗಬೇಕು. ನಾಡು, ನುಡಿ, ದೇಶದ ವಿಚಾರದಲ್ಲಿ ಸ್ವಂತಿಕೆಯನ್ನು ಮರಿಯಬಾರದು ಎಂದರು. ತಾಪಂ ಇಒ ಲಕ್ಷ್ಮೀದೇವಿ, ಪುರಸಭೆ ಮುಖ್ಯಾಧಿಕಾರಿ ಸುರೇಶ್ ಶೆಟ್ಟರ್, ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು, ಉಪಾಧ್ಯಕ್ಷೆ ದೇವಮ್ಮ ಗಂಗಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಈಶಪ್ಪ ಇಟ್ಟಂಗಿ, ಪಿಐ ಸುಧೀರ್ ಬೆಂಕಿ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಹನುಮಂತಪ್ಪ ತೊಂಡಿಹಾಳ, ಪ್ರಮುಖರಾದ ಬಸವರಾಜ ಗುಂಡೂರು, ಅಯ್ಯಪ್ಪ ಉಪ್ಪಾರ, ನಾಗರಾಜ ಅರಳಿ, ಶರಣಪ್ಪ ಪರಕಿ, ಮರಿಯಪ್ಪ ಸಾಲೋಣಿ ಇತರರಿದ್ದರು.