

ಹೊಳಲ್ಕೆರೆ: ಮಹಿಳೆಯರು ಆರ್ಥಿಕ ಸಬಲತೆ ಸಾಧಿಸಲು ಸಂಘ-ಸಂಸ್ಥೆಗಳು ಹೆಚ್ಚು ಸಹಕಾರಿ ಆಗಿವೆ ಎಂದು ಮೈರಾಡ ಸಂಸ್ಥೆ ಅಧಿಕಾರಿ ಗೌಡ ಹೇಳಿದರು.
ಗಾಮಜ್ಜಿ ಮೈರಾಡ ಮಹಿಳಾ ಸ್ವ-ಸಹಾಯ ಸಂಘದಿಂದ ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಸಭೆ ಉದ್ಘಾಟಿಸಿ ಮಾತನಾಡಿದರು.
ಸಾಲ ಸೌಲಭ್ಯ, ಗೃಹ ಉತ್ಪನ್ನಗಳ ಮೂಲಕ ವಿವಿಧ ಹಂತದಲ್ಲಿ ಕುಟುಂಬವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬಹುದು ಎಂದು ಹೇಳಿದರು.
ಐ.ಬಿ.ಶಿವಕುಮಾರ, ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಮಧುಸೂದನ್ ಮಾತನಾಡಿದರು. ದಾಕ್ಷಾಯಣಿ, ಮಮತಾ, ಶಶಿಕಲಾ ಇತರರಿದ್ದರು.