ಮಹಿಳೆಯರಿಗೆ ಆರ್ಥಿಕ ಬಲ

HLK CHANDRA 30
Published on

ಹೊಳಲ್ಕೆರೆ: ಗೃಹಲಕ್ಷ್ಮೀ ಯೋಜನೆ ಜಾರಿ ಮಹಿಳೆಯರಲ್ಲಿ ಆರ್ಥಿಕ ಬಲ ತರಲಿದೆ ಎಂದು ಬಿಜೆಪಿ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ಜಿಲ್ಲಾ, ತಾಲೂಕು ಆಡಳಿತ, ಪುರಸಭೆ, ತಾಪಂ, ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಸಂವಿಧಾನ ಸೌಧದಲ್ಲಿ ಗೃಹಲಕ್ಷ್ಮೀ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೆ ತಂದಿರುವ ಈ ಯೋಜನೆ ಅತ್ಯುತ್ತಮವಾದುದು. ಪ್ರತಿ ತಿಂಗಳು ಮಹಿಳೆಯ ಬ್ಯಾಂಕ್ ಖಾತೆಗೆ ಎರಡು ಸಾವಿರ ರೂ. ಪಾವತಿಯಾಗುತ್ತದೆ. ಈ ಹಣವನ್ನು ದುಂದು ವೆಚ್ಚ ಮಾಡದೆ ಮಕ್ಕಳ ಶಿಕ್ಷಣಕ್ಕೆ ಬಳಸಬೇಕು ಎಂದು ತಿಳಿಸಿದರು.

ತಹಸೀಲ್ದಾರ್ ಬೀಬಿಫಾತಿಮಾ ಮಾತನಾಡಿದರು. ಪುರಸಭಾ ಸದಸ್ಯರಾದ ಎಚ್.ಆರ್.ನಾಗರತ್ನಾ ವೇದಮೂರ್ತಿ, ಪಿ.ಆರ್.ಮಲ್ಲಿಕಾರ್ಜುನ, ಬಿ.ಎಸ್.ರುದ್ರಪ್ಪ, ವಿಜಯಸಿಂಹ ಖಾಟ್ರೋತ್, ಎಲ್.ಮಮತಾ ಖಾಟ್ರೋತ್, ಪಿ.ಎಚ್.ಮುರುಗೇಶ್, ಆರ್.ಎ.ಅಶೋಕ್, ಕೆ.ಸಿ.ರಮೇಶ್, ಶಭೀನಾ, ಸೈಯದ್ ಸಜೀಲ್, ಸೈಯದ್ ಮನ್ಸೂರ್, ಸುಧಾ ಬಸವರಾಜ್, ತಾಪಂ ಇಒ ಎನ್.ರವಿಕುಮಾರ್, ಪುರಸಭೆ ಮುಖ್ಯಾಧಿಕಾರಿ ವಾಸಿಂ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಎಂ.ವೀಣಾ, ಪೊಲೀಸ್ ವೃತ್ತ ನಿರೀಕ್ಷಕ ಮಾಕಾರ್ಂಡಪ್ಪ, ಬಿ.ಚಿಕ್ಕಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net