ಸೊಸೈಟಿಗಳಿಂದ ಆರ್ಥಿಕ ಶಕ್ತಿ ವೃದ್ಧಿ

Economic empowerment through societies
ಕೆರೂರ ಪಟ್ಟಣದ ಮಚರ್ಂಟ್ಸ್ ಸೊಸೈಟಿಯ 2024-25ನೇ ಸಾಲಿನ 30ನೇ ವಾರ್ಷಿಕ ಸಭೆಯನ್ನು ಸೊಸೈಟಿ ಅಧ್ಯಕ್ಷ ಧನಂಜಯ ಕಂದಕೂರ ಉದ್ಘಾಟಿಸಿ ಮಾತನಾಡಿದರು. ಸೊಸೈಟಿಯ ಉಪಾಧ್ಯಕ್ಷ ಜಗದೀಶ ಯಂಡಿಗೇರಿ, ನಿರ್ದೇಶಕರಾದ ಶಂಕ್ರಪ್ಪ ಘಟ್ಟದ, ಬಾಬು ರಾಮದುರ್ಗ, ಕೇಶವ ಕಂದಕೂರ ಇದ್ದರು.
Published on

ಕೆರೂರ : ಬಡ, ಮಧ್ಯಮ ವರ್ಗದ ಜನರಿಗೆ ಸಹಕಾರಿ ಸೊಸೈಟಿಗಳು ಆರ್ಥಿಕವಾಗಿ ಶಕ್ತಿ ತುಂಬಿದಾಗ, ಸೊಸೈಟಿಗಳು ಅಭಿವದ್ದಿ ಹೊಂದುತ್ತವೇ ’’ ಎಂದು ಮಚರ್ಂಟ್ಸ್ ಸೊಸೈಟಿ ಅಧ್ಯಕ್ಷ ಧನಂಜಯ ಕಂದಕೂರ ಹೇಳಿದರು.

ಪಟ್ಟಣದ ಸೊಸೈಟಿಯ ಸಭಾಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸೊಸೈಟಿಯ 2024-25ನೇ ಸಾಲಿನ 30ನೇ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ತೆಗೆದುಕೊಂಡ ಸಾಲವನ್ನು ಸಕಾಲಕ್ಕೆ ಮರುಪಾವತಿಸಿ, ಸೊಸೈಟಿಯ ಅಭಿವೃದ್ಧಿಗೆ ಸಹಕರಿಸಬೇಕು. ಸೊಸೈಟಿಯ ಸದಸ್ಯರ ಸಹಕಾರದೊಂದಿಗೆ ನಮ್ಮ ಸೊಸೈಟಿಯು ಪ್ರಸ್ತಕ ಸಾಲಿನಲ್ಲಿ 1.23 ಕೋಟಿ ರೂ. ಲಾಭಾಂಶ ಗಳಿಸಿದೆ. 50 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದು ಹೇಳಿದರು.

ಸೊಸೈಟಿಯ ಉಪಾಧ್ಯಕ್ಷ ಜಗದೀಶ ಯಂಡಿಗೇರಿ ಮಾತನಾಡಿ, ಸದಸ್ಯರ ವಿಶ್ವಾಸ ಗಳಿಸುವುದರೊಂದಿಗೆ ಪ್ರತಿ ವರ್ಷ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಹೇಳಿದರು. ನಿರ್ದೇಶಕ ಗಂಗಾಧರ ಘಟ್ಟದ ಮಾತನಾಡಿದರು.

ಪ್ರಸಕ್ತ ಸಾಲಿನ ಉತ್ತಮ ಗ್ರಾಹಕರಿಗೆ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ಸೊಸೈಟಿಯ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸೊಸೈಟಿಯ ಉಪಾಧ್ಯಕ್ಷ ಜಗದೀಶ ಯಂಡಿಗೇರಿ, ನಿರ್ದೇಶಕರಾದ ಶಂಕ್ರಪ್ಪ ಘಟ್ಟದ, ಬಾಬು ರಾಮದುರ್ಗ, ಕೇಶವ ಕಂದಕೂರ, ಪ್ರಕಾಶ ಮೇದಾರ, ದಾನಪ್ಪ ಪೂಜಾರ, ತಾರಾ ಹಂದ್ರಾಳ, ರತ್ನವ್ವ ಕಡಕೋಡ, ಪ್ರವೀಣ ಮಾನ್ವಿ, ಸೊಸೈಟಿಯ ಮುಖ್ಯಕಾರ್ಯನಿರ್ವಾಹಕ ರುದ್ರಪ್ಪ ಅಳಗವಾಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net