ಆರ್ಥಿಕ ಸಬಲತೆಗೆ ನರೇಗಾ ಸಹಕಾರಿ

24ALD02
ಅಳವಂಡಿಯಲ್ಲಿ ನರೇಗಾ ಕಾಮಗಾರಿಯಲ್ಲಿ ಅಂಗವಿಕಲರು ಕೆಲಸ ಮಾಡುತ್ತಿರುವುದು. ಕಾಯಕಮಿತ್ರ ಗೀತಾ, ಪ್ರಮುಖರಾದ ವೀರೇಶ ಹಾಲಗುಂದಿ, ತಿಮ್ಮಣ್ಣ, ಯಂಕಪ್ಪ, ಶಿವಪ್ಪ, ಹನುಮಂತ, ಬಾರೆ ಇಮಾಮ, ವೀರೇಶ, ಶ್ರೀದೇವಿ, ನಿಂಗಮ್ಮ, ರೇಣುಕಾ ಇದ್ದರು.
Published on

ಅಳವಂಡಿ: ನರೇಗಾ ಯೋಜನೆ ಅಂಗವಿಕಲರಿಗೂ ವರದಾನವಾಗಿದೆ ಎಂದು ಕಾರ್ಗಿಲ ಮಲ್ಲಯ್ಯ ವಿಕಲಚೇತನರ ಸಂಘದ ಅಧ್ಯಕ್ಷ ವೀರೇಶ ಹಾಲಗುಂದಿ ತಿಳಿಸಿದರು.

ಗ್ರಾಮದಲ್ಲಿ ನರೇಗಾ ಯೋಜನೆಯಡಿ ಆರಂಭವಾದ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ಉದ್ಯೋಗ ಖಾತ್ರಿ ಯೋಜನೆ ಕೂಲಿ ಕಾರ್ಮಿಕರಿಗೆ ಅನುಕೂಲವಾಗಿದೆ. ಯೋಜನೆಯಲ್ಲಿ ಕೆಲಸ ನಿರ್ವಹಿಸಿ ಆರ್ಥಿಕವಾಗಿ ಸಬಲರಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net