

ಬೀಳಗಿ:ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್ ಹಾಗೂ ಅನ್ನದಾತ ಸಹಕಾರಿ ಸಂವು ಗ್ರಾಹಕರು, ಠೇವುದಾರರ ಪ್ರೀತಿ, ವಿಶ್ವಾಸ ಗಳಿಸಿ ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಿವೆ. ಗ್ರಾಹಕರನ್ನು ಆರ್ಥಿಕವಾಗಿ ಸಬಲರಾಗಿ ಮಾಡುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಗಳ ಆಡಳಿತ ಮಂಡಳಿಗಳ ಎಲ್ಲ ನಿರ್ದೇಶಕರ ಮುಖ್ಯ ಗುರಿ ಎಂದು ಸಂಸ್ಥೆ ಸಂಸ್ಥಾಪಕ ಅಧ್ಯ ಎಂ.ಎನ್.ಪಾಟೀಲ ಹೇಳಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡ ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕಿನ 2024&25ನೇ ಸಾಲಿನ 15ನೇ ವಾರ್ಷಿಕ ಹಾಗೂ ಅನ್ನದಾತ ಸಹಕಾರಿ ಸಂದ 5ನೇ ಸರ್ವ ಸಾಧಾರಣ ಸಭೆ ಅಧ್ಯತೆ ವಹಿಸಿ ಅವರು ಮಾತನಾಡಿದರು.
ಪ್ರತಿವರ್ಷ ಬ್ಯಾಂಕ್ ಅಭಿವೃದ್ಧಿಯುತ್ತ ದಾಪುಗಾಲು ಹಾಕುತ್ತಿದೆ. 4050 ಸದಸ್ಯರು, 3.59 ಕೋಟಿ ರೂ. ನಿಧಿ, 193 ಕೋಟಿ ರೂ. ಠೇವು, 200 ಕೋಟಿ ರೂ. ದುಡಿಯುವ ಬಂಡವಾಳ ಹೊಂದುವ ಮೂಲಕ ಪ್ರಸಕ್ತ ವರ್ಷ 1.3 ಕೊಟಿ ರೂ. ಲಾಭ ಗಳಿಸಿದೆ. ಎಲ್ಲ ಶಾಖೆಗಳಲ್ಲಿ ಸಿಬಿಎಸ್ ಕೋರ್ ಬ್ಯಾಂಕಿಂಗ್ ತಂತ್ರಜ್ಞಾನ ಅಳವಡಿಸಲಾಗಿದೆ. ಬ್ಯಾಂಕ್ ತನ್ನ 18 ಶಾಖೆಗಳ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದರು.
ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನೂತನವಾಗಿ ವಿಜಯಪುರ, ನಿಡಗುಂದಿ, ಬಸವನಬಾಗೇವಾಡಿ, ಮುದ್ದೇಬಿಹಾಳ, ತಾಳಿಕೋಟೆ ಹಾಗೂ ಹುನಗುಂದದಲ್ಲಿ ಶಾಖೆಗಳನ್ನು ಪ್ರಾರಂಭಿಸುವ ಗುರಿ ಇದೆ. ಎಲ್ಲ ಶಾಖೆಗಳ ಆಡಳಿತ ಮಂಡಳಿ ಸಲಹೆ ಮತ್ತು ಬ್ಯಾಂಕ್ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ವರ್ಗದ ಪ್ರಾಮಾಣಿಕತೆ, ಗ್ರಾಹಕರು, ಠೇವುದಾರರು ಮತ್ತು ಸಾಲಗಾರರ ಪ್ರೀತಿ, ವಿಶ್ವಾಸದಿಂದ ಬ್ಯಾಂಕ್ ಅಭಿವೃದ್ಧಿ ಪಥದತ್ತ ಸಾಗಿದೆ. ಅನ್ನದಾತ ಸಹಕಾರಿ ಬ್ಯಾಂಕ್ ಕೂಡ ಅಭಿವೃದ್ಧಿಯತ್ತ ಹೆಜ್ಜೆ ಇಡುತ್ತ 7.61 ಸಾವಿರ ರೂ. ಲಾಭ ಗಳಿಸಿದೆ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಪಡಿಯಪ್ಪ ಕರಿಗಾರ ಸಭೆಗೆ ಚಾಲನೆ ನೀಡಿದರು. ಬ್ಯಾಂಕಿನ ನಿರ್ದೇಶಕರಾದ ಡಿ.ಬಿ.ಅಮಲಝರಿ, ಎಸ್.ಐ.ಜಂಬಗಿ, ರಾಜು ಬೋರ್ಜಿ, ದಯಾನಂದ ಪಾಟೀಲ, ಬಿ.ಪಿ.ಪಾಟೀಲ, ಹಣಮಂತ ಆಂಟಿನ, ರವಿ ಪಾಟೀಲ, ಎಸ್.ವಿ.ಹಿರೇನಿಂಗಪ್ಪನ್ನವರ, ಲತಾ ಪಾಟೀಲ, ಜಿ.ಜಿ.ದಿತ, ಮಲ್ಲಪ್ಪ ಮೇಟಿ, ಶರಣಪ್ಪ ಆಗ್ನಿ, ಆರ್.ಜಿ.ಪಾಟೀಲ, ಪಿ.ಎಂ.ಮಮದಾಪುರ, ಬ್ಯಾಂಕಿನ ಸಲಹೆಗಾರ ಕೆ.ಬಿ.ಕುಲಕರ್ಣಿ, ಪ್ರಧಾನ ವ್ಯವಸ್ಥಾಪಕ ಪ್ರವಿಣ ಕಡಕೋಳ, ಜಿ.ಅರ್.ಪಾಟೀಲ, ಮೇಲ್ವಿಚಾರಕ ಎಂ.ಎಸ್.ಬೆಳವಲ್ಲ, ಎಸ್.ಎ.ನಾಗನಗೌಡರ ಇದ್ದರು.
ಉತ್ತಮ ಗ್ರಾಹಕರಿಗೆ ಸನ್ಮಾನ
ಬ್ಯಾಂಕ್ ಸಭೆಯಲ್ಲಿ ಉತ್ತಮ ಗ್ರಾಹಕರು, ಠೇವುದಾರರು ಹಾಗೂ ಪಿಯು ಮತ್ತು ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಬ್ಯಾಂಕ್ ಗ್ರಾಹಕರ ಮಕ್ಕಳನ್ನು ಸನ್ಮಾನಿಸಲಾಯಿತು.
ಬೀಳಗಿ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡ ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್ ಹಾಗೂ ಅನ್ನದಾತ ಸಹಕಾರಿ ಸಂದ ವಾರ್ಷಿಕ ಸಭೆಗೆ ಅಧ್ಯಕ್ಷ ಎಂ.ಎನ್.ಪಾಟೀಲ, ಪಟ್ಟಣ ಪಂಚಾಯಿತಿ ಸದಸ್ಯ ಪಡಿಯಪ್ಪ ಕರಿಗಾರ ಚಾಲನೆ ನಿಡಿದರು. ನಿರ್ದೇಶಕರಾದ ಡಿ.ಬಿ.ಅಮಲಝರಿ, ಎಸ್.ಐ.ಜಂಬಗಿ, ರಾಜು ಬೋರ್ಜಿ, ದಯಾನಂದ ಪಾಟೀಲ, ಬಿ.ಪಿ.ಪಾಟೀಲ, ಹಣಮಂತ ಆಂಟಿನ ಇತರರು ಇದ್ದರು.