ಎನ್‌ಆರ್‌ಐಜಿಯಿಂದ ಅರ್ಥಿಕ ಸಬಲತೆ

18sri-1
Published on

ಶೃಂಗೇರಿ: ಮಹಿಳಾ ಸ್ವಾವಲಂಬನೆಗಾಗಿ ನರೇಗಾ ಯೋಜನೆಯಡಿ ಎನ್‌ಆರ್‌ಎಲ್‌ಎಮ್ ರಚಿತ ಬಿಪಿಎಲ್‌ಎ್ ಸಂಘಗಳಿಗೆ ನರ್ಸರಿ ಬೆಳೆಸುವ ಅವಕಾಶವಿದ್ದು, ಮಹಿಳೆಯರು ಇದರ ಸದುಪಯೋಗ ಪಡೆಯಬೇಕು ಎಂದು ಮೆಣಸೆ ಗ್ರಾಪಂ ಪಿಡಿಒ ನಾಗಭೂಷಣ್ ಹೇಳಿದರು.

ಮೆಣಸೆ ಗ್ರಾಪಂ ಸಭಾಂಗಣದಲ್ಲಿ ನರೇಗಾ ಯೋಜನೆಯ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಹಿರಿಯರು, ವಿಶೇಷ ಚೇತನರು ಅರ್ಧ ಕೆಲಸ ಮಾಡಿದರೂ ಅವರಿಗೆ ಪ್ರತಿ ದಿನ 368 ಕೂಲಿ ರೂ. ನೀಡಲಾಗುವುದು.ಉದ್ಯೋಗ ಚೀಟಿ ಹೊಂದಿದ ಕುಟುಂಬಕ್ಕೆ 2.50 ಲಕ್ಷ ರೂ.ವರೆಗೆ ವೈಯಕ್ತಿಕ ಕಾಮಗಾರಿ ಕೈಗೊಳ್ಳಬಹುದು. ಕೃಷಿಹೊಂಡ, ತೋಟಗಾರಿಕಾ ಬೆಳೆ, ದನ, ಕೋಳಿ, ಕುರಿ ಶೆಡ್‌ಗಳ ನಿರ್ಮಾಣಕ್ಕೂ ಅವಕಾಶವಿದೆ ಎಂದರು.

ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾಮರಿಯಪ್ಪ ಮಾತನಾಡಿ, ನರೇಗಾ ಯೋಜನೆ ಸಮಾಜದ ಕಟ್ಟಕಡೆ ಜನರನ್ನು ತಲುಪುತ್ತಿದ್ದು ಲಾನುಭವಿಗಳು ಆನ್‌ಲೈನ್ ಮುಲಕ ಅರ್ಜಿ ಸಲ್ಲಿಸಬಹುದು. ಮಹಿಳೆಯರು ಮನೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಗಳ ಮೂಲಕ ಅರ್ಥಿಕ ಸಬಲತೆ ಪಡೆಯಬಹುದು ಎಂದರು.

ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಸಂಜೀವ್ ಮಾತನಾಡಿ, ಇಲಾಖೆಯಲ್ಲಿ ಸುಮಾರು 20 ಸಾವಿರ ಸಸಿಗಳು ಲಭ್ಯವಿದ್ದು , ಲಾನುಭವಿಗಳು ಸದುಪಯೋಗ ಪಡೆಯಬೇಕು ಎಂದರು. ಗ್ರಾಪಂ ಉಪಾಧ್ಯಕ್ಷೆ ಭಾಗ್ಯ, ಸದಸ್ಯರಾದ ಶಾಮಣ್ಣ, ರಾಜುಶೂನ್ಯ, ಅಜಿತ್ ಶೆಟ್ಟಿ, ಸುಮಲತಾ, ಮಂಜುನಾಥ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net